ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ‘ಕೈ’ ಕಲಿಗಳು ಭರಪೂರ ಭರವಸೆಗಳನ್ನು ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಬಿಡುಗಡೆಗೆ ಸಾಂಸ್ಕೃತಿಕ ಟಚ್ ನೀಡಲಾಗಿದ್ದು, ವಿಳ್ಯದೆಲೆ ಅಡಿಕೆ, ಅರಿಶಿನ, ಕುಂಕುಮ ಇಟ್ಟು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಣಾಳಿಕೆ ಪುಸ್ತಕಕ್ಕೆ ಕನ್ನಡದ ಬಾವುಟದ ಬಣ್ಣ ಹಚ್ಚಲಾಗಿದೆ.
‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಹೆಸರಿನಲ್ಲಿ ಪ್ರಣಾಳಿಕೆ ರಿಲೀಸ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ನಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, KPCC ಅಧ್ಯಕ್ಷ D.K. ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದರು.
ಪ್ರಣಾಳಿಕೆಯ ಮುಖ್ಯಾಂಶಗಳು
ಸರ್ಕಾರದ ಖಾಲಿಯಿರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು 1 ವರ್ಷದಲ್ಲಿ ಭರ್ತಿ
2006ರಿಂದ ನೇಮಕರಾಗಿರುವ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ
ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ಪುನಶ್ಚೇತನ ಮತ್ತು ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ
ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ವಿಸ್ತರಣೆ
ಮೈಸೂರಿನಲ್ಲಿ 500 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಯ ಡಾ.ರಾಜ್ಕುಮಾರ್ ಫಿಲ್ಮಂ ಸಿಟಿ ನಿರ್ಮಾಣ
ಬೆಂಗಳೂರು ನಗರದೆಲ್ಲೆಡೆ ಸಂಪರ್ಕ ಕಲ್ಪಿಸಲು ಇ-ರಿಕ್ಷಾಗಳ ಅಳವಡಿಕೆ
ಖಾಲಿ ಇರುವ ಶಿಕ್ಷಕ್ಷರ ಹುದ್ದೆಗಳನ್ನು ಭರ್ತಿ
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್
ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ
ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ.
ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು
ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ
ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ
ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ
ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ
ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ
ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆಗಳ ನಿರ್ಮಾಣ
ಕನಕಪುರದಲ್ಲಿ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
ರಬ್ಬರ್ ಕೃಷಿಗೆ 25 ಕೋಟಿ ಪ್ಯಾಕೇಜ್
ಮಲೆನಾಡು ರೈತರಿಗೆ ಸಾಗುವಳಿ ಪತ್ರ ನೀಡಿಕೆ
ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ
ಕೋಲಾರ, ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣೆ ಕೇಂದ್ರ
ಕಾಫಿ ಕರ್ನಾಟಕ ಬ್ರಾಂಡ್ ಸೃಷ್ಟಿ
ಪುಣ್ಯ ಕೋಟಿ ನಂದಿನಿ ನಮ್ಮದು ನಮ್ಮದೇ
ರೇಷ್ಮೆ ರೀಲರ್ ಗಳಿಗೆ 3 ಲಕ್ಷ ಬಡ್ಡಿ ರಹಿತ ಸಾಲ
ಮಿಷನ್ ಕ್ಷೀರ ಕ್ರಾಂತಿ ಕಾರ್ಯಕ್ರಮ
ಹಾಲಿನ ಸಬ್ಸಿಡಿ 5 ರಿಂದ 7 ರೂ.ಗೆ ಹೆಚ್ಚಳ
ಋಣ ಮುಕ್ತ ಕುರಿಗಾಹಿ ಯೋಜನೆ ಜಾರಿ
ಮುಂದಿನ ಐದು ವರ್ಷ ನೀರಾವರಿಗಾಗಿ 1.50 ಲಕ್ಷ ಕೋಟಿ ಅನುದಾನ ವಿನಿಯೋಗ
ಐದು ವರ್ಷದಲ್ಲಿ ಮೇಕೆದಾಟು ಮಹದಾಯಿ ಯೋಜನೆ ಪೂರ್ಣ
ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ
ಮಹದಾಯಿ ಯೋಜನೆಗೆ 3 ಸಾವಿರ ಕೋಟಿ