Friday, November 22, 2024

ಮೋದಿ ಆಡಳಿತದಿಂದ ‘ದೇಶ ಸುಭದ್ರ’ವಾಗಿದೆ : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ(ಆಡಳಿತ)ದಿಂದ ಇಂದು ದೇಶ ಸುಭದ್ರವಾಗಿದೆ ಎಂದು ಶಿಡ್ಲಘಟ್ಟದ ಬಿಜೆಪಿ ಅಭ್ಯರ್ಥಿ ಸೀಕಲ್‌ ರಾಮಚಂದ್ರಗೌಡ ಅವರು ಅಭಿಪ್ರಾಯಪಟ್ಟರು.

ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರ್ಲಮಿಲ್ಲ ಹಳ್ಳಿ ಗ್ರಾಮ ಹಾಗೂ ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 300ಕ್ಕೂ ಹೆಚ್ಚು ಯುವಕರು ಸೀಕಲ್ ರಾಮಚಂದ್ರಗೌಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿದರು.

ನೂತನವಾಗಿ ಪಕ್ಷ ಸೇರ್ಪಡೆಯಾದವರನ್ನುದ್ದೇಶಿಸಿ ಮಾತನಾಡಿದ ಸೀಕಲ್ ರಾಮಚಂದ್ರಗೌಡ ಅವರು, ದೇಶದ ಪ್ರಗತಿಗೆ ಮೋದಿ ಅವರ ಕೊಡುಗೆ ಅಪಾರ. ಇಂದು ದೇಶ ಸುಭದ್ರವಾಗಿರಲು ಮೋದಿ ಸರ್ಕಾರ ಕಾರಣ. ಶಿಡ್ಲಘಟ್ಟದ ಸಮಗ್ರ ಅಭಿವೃದ್ಧಿಗೆ ನೀವೆಲ್ಲ ಕೈಜೋಡಿಸಿದ್ದು ಸಂತೋಷ. ಈ ಕ್ಷೇತ್ರ ಕಳೆದ ಹಲವು ವರ್ಷಗಳಿಂದ ಹಿಂದುಳಿದಿದೆ. ಈಗ ಪ್ರಗತಿಯತ್ತ ಮುನ್ನಡೆಯಬೇಕಿದೆ. ಮೇ 10ರಂದು ಬಿಜೆಪಿಗೆ ನಿಮ್ಮ ಮತ ನೀಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡುತ್ತೀರಿ ಎಂದು ಭಾವಿಸುತ್ತೇನೆ ಹೇಳಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ

ಸೀಕಲ್ ರಾಮಚಂದ್ರಗೌಡ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಒಂದು ರೀತಿಯ ವಿದ್ಯುತ್‌ ಸಂಚಲನ ಉಂಟಾಗುತ್ತಿದೆ. ಅನ್ಯ ಪಕ್ಷಗಳ ಸಾವಿರಾರು ಮುಖಂಡರು, ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ.

ಬಿಜೆಪಿ ಸೇರಿದ 300ಕ್ಕೂ ಹೆಚ್ಚು ಯುವಕರು

ದೊಡ್ಡತೇಕಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊರ್ಲಮಿಲ್ಲ ಹಳ್ಳಿ ಗ್ರಾಮ ಮತ್ತು ವೈ ಹುಣಸೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 300ಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರಿದರು. ಗೊರ್ಲಮಿಲ್ಲಹಳ್ಳಿಯ ಮುಖಂಡರಾದ ನಾರಾಯಣಸ್ವಾಮಿ, ಗಂಗ ನಾಯಕ, ದ್ವಾವಪ್ಪ, ಸುರೇಶ, ನಾಗರಾಜು ಅವರ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಜನ ಶಾಲು ಧರಿಸಿ ಪಕ್ಷಕ್ಕೆ ಸೇರಿದರು. ವೇದಿಕೆ ಮೇಲೆ ಮಾಜಿ ಶಾಸಕರಾದ ಎಂ ರಾಜಣ್ಣ, ಕನಕಪ್ರಸಾದ್‌, ನಟರಾಜು, ದೇವು, ಸ್ವಾಮಿ, ಪ್ರಭಾಕರ್‌, ಜಯರಾಮ್‌, ಮೂರ್ತಿ ಅವರು ಹಾಜರಿದ್ದರು.

ವೈ ಹುಣಸೇನಹಳ್ಳಿಯಲ್ಲಿ ಮಾಜಿ ಶಾಸಕರಾದ ಎಂ ರಾಜಣ್ಣ ಅವರರೊಂದಿಗೆ ಕೊತ್ತನೂರ್‌ ನಟರಾಜು, ದೇವರಾಜು, ಶಿಡ್ಲಘಟ್ಟ ಸ್ವಾಮಿ, ಸೊಣ್ಣೆನಹಳ್ಳಿ ಮೂರ್ತಿ, ಪಿಂಡಪಾಪನಹಳ್ಳಿ ನರೇಂದ್ರ, ನಾರಾಯಣಸ್ವಾಮಿ, ರಾಮೂರ್ತಿ, ಆಂಜನಪ್ಪ ಅವರ ಸಮ್ಮುಖದಲ್ಲಿ 150ಕ್ಕೂ ಹೆಚ್ಚು ಜನರು ಬಿಜೆಪಿಗೆ ಸೇರಿದರು.

RELATED ARTICLES

Related Articles

TRENDING ARTICLES