ಬೆಂಗಳೂರು : ಮಂಡ್ಯದಲ್ಲಿ ಸಹ ಈ ಬಾರಿ ಕಮಲ ಅರಳಲಿದೆ. ಆ ಮೂಲಕ ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಜಯವಾಹಿನಿ ಯಾತ್ರೆಯ ಅಂಗವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿದರು. ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರ ಪರ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿ.ಪಿ ಉಮೇಶ್, ನಟಿ ತಾರಾ ಅನುರಾಧ, ನೆ.ಲ ನರೇಂದ್ರಬಾಬು ವೀರಯ್ಯ ಹಾಗೂ ಯುವ ನಾಯಕ ಅಶೋಕ್ ಜಯರಾಮ್ ಹಾಗೂ ಮತ್ತಿತರ ನಾಯಕರು ಭಾಗವಹಿಸಿದ್ದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ಹಾಗೂ ಅಶೋಕ್ ಜಯರಾಮ್ ಪರ ಕಾರ್ಯಕರ್ತರು ಘೋಷಣೆ ಕೂಗಿದರು.
ಇಂದು ಜಯವಾಹಿನಿ ಯಾತ್ರೆಯ ಅಂಗವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಿ, ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಜಯರಾಂ ರವರ ಪರ ಪ್ರಚಾರ ನಡೆಸಿದೆನು. ಮಂಡ್ಯದಲ್ಲಿ ಸಹ ಈ ಬಾರಿ ಕಮಲ ಅರಳಿ, ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಲಿದೆ.#BJPYeBharavase pic.twitter.com/prxnK86hut
— Basavaraj S Bommai (@BSBommai) May 1, 2023
ಇದನ್ನೂ ಓದಿ : ತಂದೆ ‘ಜಯರಾಮ್ ಹೆಸರೇ ನನಗೆ ಶ್ರೀರಕ್ಷೆ’ : ಅಶೋಕ್ ಜಯರಾಮ್
ಸಿಎಂ ಬೊಮ್ಮಾಯಿ ಪ್ರಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರು, ಮಂಡ್ಯದಲ್ಲಿ ಮುಖ್ಯಮಂತ್ರಿ ಗಳಾದಂತ ಬಸವರಾಜ್ ಬೊಮ್ಮಾಯಿ ಅವರ ರೋಡ್ ಶೋ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಹೇಳಿದರು.
ಮಂಡ್ಯ ನಗರದ (23ನೇ ವಾರ್ಡ್) ಲೇಬರ್ ಕಾಲೊನಿಯ ಶ್ರೀ ಮಾರಮ್ಮನ ದೇವಸ್ಥಾನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಅಶೋಕ್ ಜಯರಾಮ್ ರವರು ಆಗಮಿಸಿ ಪೂಜೆ ಸಲ್ಲಿಸಿ, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಾತನಾಡಿ ಮತಯಾಚನೆ ಮಾಡಿದರು, ನಂತರ ಅಜರ್, ಅನ್ಸರ್ ಮತ್ತಿತರ ಮುಸಲ್ಮಾನ್ ಬಾಂಧವರು ಬಿಜೆಪಿ ಸೇರ್ಪಡೆಯಾದರು.