ಬೆಂಗಳೂರು : ವಿರಾಟ್ ಕೊಹ್ಲಿ ಆಡುವ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ದೇ ಆದ್ರೆ ಒಮ್ಮೆಲೆ ಎರಡು ದಾಖಲೆಗಳು ನಿರ್ಮಾಣವಾಗಲಿದೆ.
ಹೌದು, ಐಪಿಎಲ್ ನ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೇಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲರ ಗಮನ ವಿರಾಟ್ ಕೊಹ್ಲಿ ದಾಖಲೆಯ ಮೇಲೆ ನೆಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪತ್ನಿ ಅನುಷ್ಕಾ ಶರ್ಮಾಗೆ ಗಿಫ್ಟ್ ಕೂಡಲಿದ್ದಾರೆಯೇ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.
ಆ.. ದಾಖಲೆಗೆ ಬೇಕು 43 ರನ್
ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದರೆ ಎರಡು ವಿಶೇಷ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿರುವ ವಿರಾಟ್ ಕೊಹ್ಲಿ 43 ರನ್ ಬಾರಿಸಿದರೆ ಐಪಿಎಲ್ನಲ್ಲಿ 7 ಸಾವಿರ ಪೂರೈಸಿದ ಮೊದಲ ಬ್ಯಾಟರ್ ಎಂದ ದಾಖಲೆ ಬರೆಯಲಿದ್ದಾರೆ.
Love you through thick, thin and all your cute madness ♾️. Happy birthday my everything ❤️❤️❤️ @AnushkaSharma pic.twitter.com/AQRMkfxrUg
— Virat Kohli (@imVkohli) May 1, 2023
ಐಪಿಎಲ್ನ ಮೊದಲ ಬ್ಯಾಟರ್
ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಸದ್ಯ 6,957 ರನ್ ಕಲೆಹಾಕಿದ್ದಾರೆ. ಲಕ್ನೋ ವಿರುದ್ಧ ಅರ್ಧಶತಕ ಪೂರೈಸಿದರೆ 7 ಸಾವಿರ ರನ್ಗಳ ವಿಶೇಷ ಸಾಧನೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಐಪಿಎಲ್ನ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಕಿಂಗ್’ ಕೊಹ್ಲಿ ‘ದರ್ಬಾರ್ ‘ : ಹೊಸ ದಾಖಲೆ ನಿರ್ಮಾಣ
ಒಂದೇ ತಂಡದ ಪರ 7 ಸಾವಿರ ರನ್
ವಿರಾಟ್ ಕೊಹ್ಲಿ ಆರಂಭದಿಂದಲೂ ಆರ್ಸಿಬಿ ತಂಡ ಪರ ಮಾತ್ರ ಕಣಕ್ಕಿಳಿದಿದ್ದಾರೆ. ಇಂದಿನ ಪಂದ್ಯದಲ್ಲಿ 7 ಸಾವಿರ ರನ್ ಪೂರೈಸಿದರೆ, ಒಂದೇ ತಂಡದ ಪರ 7 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ. ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣವೊಂದರಲ್ಲೇ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆಯೂ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ.
53 ಬಾರಿ 50+ ರನ್ ಗಳಿಕೆ
ವಿರಾಟ್ ಕೊಹ್ಲಿ ಒಟ್ಟು ಐಪಿಎಲ್ ನಲ್ಲಿ ಒಟ್ಟು 53 ಬಾರಿ 50(ಅರ್ಧಶತಕ)ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಆ ಮೂಲಕ ಐಪಿಎಲ್ನಲ್ಲಿ ಹೆಚ್ಚು ಬಾರಿ 50+ ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಲಕ್ನೋ ವಿರುದ್ಧದ ಇಂದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ದೇ ಆದಲ್ಲಿ ಇನ್ನೂ ಅನೇಕ ದಾಖಲೆಗಳು ಸೃಷ್ಟಿಯಾಗಲಿವೆ.