Sunday, January 19, 2025

15 ವರ್ಷದಿಂದ ‘ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡ್ತಿದೆ’ : ಸಮೃದ್ಧಿ ಮಂಜುನಾಥ್

ಬೆಂಗಳೂರು : 15 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಯುವಕರ ಸಮಸ್ಯೆಗೆ ಸ್ಪಂದಿಸದೇ ಬರೀ ಕೆಟ್ಟ ರಾಜಕಾರಣಕ್ಕೆ ಒಳಪಟ್ಟಿದೆ ಎಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಮುಳಬಾಗಿಲು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಇಂದು ಸಮೃದ್ಧಿ ಮಂಜುನಾಥ್ ಹಲವು ಮುಖಂಡರೊಂದಿಗೆ ಪ್ರಚಾರ ನಡೆಸಿ, ಮತಯಾಚಿಸಿದರು.

ಪ್ರಚಾರದ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ಯುವಕರು ನಮಗೆ ಕೈಗಾರಿಕಾ ಇಂಡಸ್ಟ್ರಿ ಬೇಕು. ನೀವು ಮಾಡಿಕೊಡಿ, ನಿಮ್ಮ ಕೈಯಲ್ಲಿ ಆಗುತ್ತದೆ ಎಂದು ಪ್ರತೀ ಹಳ್ಳಿಯಲ್ಲೂ ಯುವಕರ ಧ್ವನಿ ಕೇಳಿಬರುತ್ತಿದೆ. ಇದು ನನಗೆ ತುಂಬಾ ನೋವನ್ನು ಉಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ : ತಾಯಿಯ ಋಣ ಜನುಮ-ಜನುಮದಲ್ಲೂ ತೀರಿಸಲಾಗದು : ಸಮೃದ್ಧಿ ಮಂಜುನಾಥ್

15 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ಕೈಗಾರಿಕಾ ಇಂಡಸ್ಟ್ರಿಗೆ ಒತ್ತು ಕೊಟ್ಟಿಲ್ಲ. ಬರೀ ಕೆಟ್ಟ ರಾಜಕಾರಣಕ್ಕೆ ಒಳಪಟ್ಟಿದೆ. ಮುಳಬಾಗಿಲು ಕ್ಷೇತ್ರಕ್ಕೆ ಬೇಕಾದ ಮೂಲಭೂತ ಸೌಕರ್ಯ ಮರೆತಿದೆ. ತಾಲ್ಲೂಕಿನ ಸ್ವಾಭಿಮಾನಿ ಜನತೆಯ ಬೇಡಿಕೆಯನ್ನು ಈಡೇರಿಸುವುದಾಗಿ ನಾನು ಭರವಸೆ ಕೊಟ್ಟಿದ್ದೇನೆ ಎಂದು ಸಮೃದ್ಧಿ ಮಂಜುನಾಥ್ ಹೇಳಿದರು.

ಕ್ಷೇತ್ರದಲ್ಲೇ ಯುವಕರಿಗೆ ಉದ್ಯೋಗವಕಾಶ

ಮುಳಬಾಗಿಲು ತಾಲ್ಲೂಕಿನಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗೆ ಸ್ಪಂದಿಸಲು ವಿಫಲವಾಗಿದೆಯೆಂಬುದು ಗ್ರಾಮೀಣ ಭಾಗದಲ್ಲಿ ಬೊಟ್ಟು ಮಾಡಿ ತೋರುತ್ತಿದೆ. ಯುವ ಸಮೂಹ ಕ್ಷೇತ್ರದಲ್ಲೇ ದುಡಿದು ಕುಟುಂಬದೊಂದಿಗೆ ಸ್ವಾವಲಂಭಿ ಜೀವನ ಕಟ್ಟಿಕೊಳ್ಳಲು ಕಾರ್ಖಾನೆಗಳನ್ನು ಸ್ಥಾಪಿಸಿ, ಉದ್ಯೋಗವಕಾಶ ಕಲ್ಪಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವದಿಸಿ

ಇದೇ ವೇಳೆ ಮುಳಬಾಗಿಲು ಮತಕ್ಷೇತ್ರದ ಹನುಮನಹಳ್ಳಿ ಪಂಚಾಯಿತಿಯಲ್ಲಿ ಸಮೃದ್ಧಿ ಮಂಜುನಾಥ್ ಪ್ರಚಾರ ನಡೆಸಿದರು. ದಳಪತಿಗೆ ಪುಷ್ಪಾರ್ಚನೆ ಮತ್ತು ಮಹಿಳೆಯರು ಹಾರತಿಯೊಂದಿಗೆ ಸ್ವಾಗತ ಕೋರಿದರು. ನಿಮ್ಮ ಮನೆಯ ಮಗನಾಗಿ ಸರ್ವಜನಾಂಗದ ಶಾಂತಿಯ ತೋಟ ಎಂಬ ನುಡಿಯನ್ನು ನಂಬಿ ಕ್ಷೇತ್ರ ಬಿಡದೆ ದುಡಿಯುತ್ತಿದ್ದೇನೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ತಾವೆಲ್ಲರೂ ಕ್ರ.ಸಂ 2 ತೆನೆ ಹೊತ್ತ ರೈತ ಮಹಿಳೆಯ ಗುರುತಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿ ಮಾಡಲು ಹಾರೈಸಿ ಎಂದು ಮನವಿ ಮಾಡಿದರು.

RELATED ARTICLES

Related Articles

TRENDING ARTICLES