Sunday, November 3, 2024

ಬಿಜೆಪಿ ಪ್ರಣಾಳಿಕೆಯಲ್ಲಿ ‘ಪುನೀತ’ : ಅಪ್ಪು ಹೆಸರಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಈ ಪ್ರಣಾಳಿಕೆಯಲ್ಲಿ ಸ್ಯಾಂಡಲ್ ವುಡ್ ರಾಜರತ್ನ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಮೈಸೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಯಿತು.

ಪ್ರಜಾ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಹೇಳಿದರು. ಈಗಾಗಲೇ ಬಜೆಟ್​ನಲ್ಲೂ ಕೃಷಿಗೂ ಹೆಚ್ಚು ಆದ್ಯತೆ ನೀಡಿದ್ದೇವೆ. ಸಿರಿಧಾನ್ಯಗಳ ಉತ್ಪಾದನೆ, ಮೀನುಗಾರಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.

ಜನರ ಹಿತದೃಷ್ಟಿಯನ್ನಿಕೊಟ್ಟುಕೊಂಡು ಪ್ರಣಾಳಿಕೆ ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ. ಸುಮಾರು 2 ವರ್ಷ ಕೊರೊನಾದಿಂದ ಆರ್ಥಿಕ ಕುಸಿತ ಆಯಿತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : ಬಿಜೆಪಿಗೆ ‘ಜನ ಸೇವೆಯೇ ರಾಷ್ಟ್ರಸೇವೆ’ : ಪ್ರಧಾನಿ ಮೋದಿ

ರೈತ ವರ್ಗಕ್ಕೆ 12 ಭರವಸೆ

200 ಮೀನು ಕೃಷಿ ಉತ್ಪಾದನ ಕೇಂದ್ರ

ಭಗೀರಥ ಶಪಥ ಯೋಜನೆಯಡಿ ಬಾಕಿ ಉಳಿದಿರುವ ನಿರಾವರಿ ಯೋಜನೆ ಪೂರ್ಣ

ಇಸ್ರೇಲ್‌ ಮಾದರಿ ಹನಿ ನೀರಾವರಿ ಯೋಜನೆ

30 ಸಾವಿರ ಕೋಟಿ ಮೊತ್ತದ K-ಅಗ್ರಿಫಂಡ್‌ ಯೋಜನೆ

ಕೃಷಿಕ ಬಂಧು ಯೋಜನೆಯಲ್ಲಿ ಗ್ರಾ.ಪಂ.ಗಳಲ್ಲಿ ಕಿರು ಶೀತಲೀಕರಣ ಸೌಲಭ್ಯ

APMC ಕೇಂದ್ರಗಳ ಆಧುನೀಕರಣ ಮತ್ತು ಡಿಜಿಟಲೀಕರಣ

5 ಹೊಸ ಕೃಷಿ ಉದ್ಯಮ ಕ್ಲಸ್ಟರ್‌, 3 ಆಹಾರ ಸಂಸ್ಕರಣ ಪಾರ್ಕ್‌ ಸ್ಥಾಪನೆ

ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಲೀಟರ್‌ಗೆ 5 ರಿಂದ 7 ರೂಪಾಯಿಗೆ ಹೆಚ್ಚಳ

ಸಿರಿಧಾನ್ಯ ಕೃಷಿಗೆ ಉತ್ತೇಜನಕ್ಕೆ ‘ಸಿರಿ ಅನ್ನದ ಮೂಲಕ ಶ್ರೀಸಂಪದ’ ಮಿಷನ್‌

 

RELATED ARTICLES

Related Articles

TRENDING ARTICLES