Monday, December 23, 2024

‘ಚಿಕ್ಕಪೇಟೆ ಪ್ರಣಾಳಿಕೆ’ ಬಿಡುಗಡೆ ಮಾಡಿದ ಕೆಜಿಎಫ್ ಬಾಬು

ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ಕೆಜಿಎಫ್ ಬಾಬು(ಯೂಸಫ್ ಶರೀಫ್) ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು (ಯೂಸಫ್ ಶರೀಫ್) ಅವರು ಇಂದು ‘ನಮ್ಮ ಚಿಕ್ಕಪೇಟೆ, ನನ್ನ ಭರವಸೆ’ ಘೋಷ ವಾಕ್ಯದೊಂದಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ 15 ಅಂಶಗಳ ಭರವಸೆಯನ್ನು ಕೆಜಿಎಫ್ ಬಾಬು ಅವರು ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ : ಕೇಸರಿ ಕಲಿಗಳಿಂದ ಭರಪೂರ ಆಶ್ವಾಸನೆಗಳು

ಪ್ರಣಾಳಿಕೆಯಲ್ಲಿ ಏನೇನಿದೆ?

  1. APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ

2. APL- BPL ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

3. SSLC, PUC, ಡಿಗ್ರಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

4. ಪ್ರತೀ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ

5. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

6. ಪ್ರತೀ ಮನೆಗೆ ಉಚಿತ ಡಿಟಿಎಚ್ ಸಂಪರ್ಕ

7. ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಮಹಿಳೆಯರಿಗೆ ಗುಡಿಕೈಗಾರಿಕೆ ತರಬೇತಿ, ಸ್ವಂತ ಉದ್ದಿಮೆ ಸ್ಥಾಪನೆಗೆ ಸಹಾಯಧನ

8. ರಿಯಾಯಿತಿ ದರದಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆ ಸ್ಥಾಪನೆ

9. ಸರ್ಕಾರದ ಅನುದಾನ ಹಾಗೂ ಯೋಜನೆಗಳನ್ನು ಕ್ಷೇತ್ರದ ಜನತೆಯ ಮುಂದೆ ಬಹಿರಂಗ ಚರ್ಚೆ, ಕಳಪೆ ಕಾಮಗಾರಿ ನಡೆಯದಂತೆ ಕ್ರಮ

10. ಮಾದರಿ ಕ್ಷೇತ್ರವಾಗಿ ಮಾಡಿ ಇತಿಹಾಸ ನಿರ್ಮಾಣ

11. ನಾಗರೀಕರಿಗೆ ಸೌಲಭ್ಯ ಒದಗಿಸಲು ವಿಶೇಷ ಕಛೇರಿ, ವೆಬ್ ಸೈಟ್ ಆ್ಯಪ್ ನಿರ್ಮಾಣ

12. ಚಿಕ್ಕಪೇಟೆ ಕ್ಷೇತ್ರದ ಟ್ಯಾಂಕ್ ಗಾರ್ಡನ್, ಸಿದ್ದಾಪುರ, ಬಿಟಿಬಿ ಏರಿಯಾ, LIC ಕಾಲೋನಿ, ರಾಜಣ್ಣ ಲೇಔಟ್, BHEL ಲೇಔಟ್, ಚಿನ್ನಯ್ಯನ ಪಾಳ್ಯ, ನಿವಾಸಿಗಳಿಗೆ ಒಂದುಮುಕ್ಕಾಲು ಎಕರೆ ಸ್ಮಶಾನ ಜಾಗ ನೀಡಲಾಗುವುದು, ಮೇ 15, 2023 ರಂದು ಜಮೀನು ಹಸ್ತಾಂತರ

13. ಕೃಷ್ಣಪ್ಪ ಗಾರ್ಡನ್ ನ ಹುಸ್ಮಾ ಮಸೀದಿಗೆ ಜಮೀನು ಖರೀದಿಗೆ ಧನ ಸಹಾಯ, ನೀತಿ ಸಂಹಿತೆ ಮುಗಿದ ನಂತರ ಧನ ಸಹಾಯ

14. ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಗೆ ಸಹಾಯ, ಧಾರ್ಮಿಕ ಕೇಂದ್ರಗಳಿಗೆ  86.40 ಕೋಟಿ ಅನುದಾನ

15. ಹಿಂದೂ ಸಮಾಜದ ರುದ್ರಭೂಮಿಗೆ 2 ಎಕರೆ ಭೂಮಿ ನೀಡಲಾಗುವುದು, ಇದನ್ನು ನೀತಿ ಸಂಹಿತೆ ಮುಗಿದ ನಂತರ ಹಸ್ತಾಂತರ

RELATED ARTICLES

Related Articles

TRENDING ARTICLES