ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಸಮೃದ್ಧ ಕರ್ನಾಟಕಕ್ಕಾಗಿ ರಾಜ್ಯದ ಜನತೆಯಿಂದಲೇ, ರಾಜ್ಯದ ಜನತೆಗಾಗಿ, ರಾಜ್ಯದ ಜನತೆಗೋಸ್ಕರ ಅವರ ಸಲಹೆಗಳ ಆಧಾರದಲ್ಲಿ ‘ಬಿಜೆಪಿ ಪ್ರಜಾ ಪ್ರಣಾಳಿಕೆ 2023’ ರೂಪಿಸಲಾಗಿದೆ.
ಅರ್ಧ ಲೀಟರ್ ನಂದಿನಿ ಹಾಲು ಉಚಿತ
ಬಿಪಿಎಲ್ ಕಾರ್ಡ್ ಇರುವ ಪ್ರತೀ ಕುಟುಂಬಕ್ಕೆ ಪೋಷಣಾ ಯೋಜನೆ ಅಡಿ ನಿತ್ಯ ಅರ್ಧ ಲೀಟರ್ ಹಾಲನ್ನು ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ನಗರ ಪ್ರದೇಶದಲ್ಲಿ 5 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುತ್ತೇವೆ. ಇದಲ್ಲದೆ ಪಡಿತರ ಕಾರ್ಡು ಹೊಂದಿರುವ ಕುಟುಂಬಗಳಿಗೆ 5 ಕೆಜಿ ಅಕ್ಕಿ ಜತೆಗೆ 5 ಕೆಜಿ ಸಿರಿಧಾನ್ಯವನ್ನೂ ವಿತರಿಸುತ್ತೇವೆ. ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವವನ್ನು 10 ಲಕ್ಷ ರೂ.ಗೆ ಏರಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ಡಿ.ವಿ ಸದಾನಂದಗೌಡ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
#WATCH | BJP national president JP Nadda releases party's vision document/manifesto for Karnataka elections in Bengaluru. pic.twitter.com/qm2wyGdppZ
— ANI (@ANI) May 1, 2023
ಇದನ್ನೂ ಓದಿ : ಕಾಂಗ್ರೆಸ್ ನ ‘ಗುಜರಿ ಇಂಜಿನ್’ನಿಂದ ಅಭಿವೃದ್ಧಿ ಅಸಾಧ್ಯ : ಪ್ರಧಾನಿ ಮೋದಿ
ಪ್ರಜಾ ಪ್ರಣಾಳಿಕೆಯ ಪ್ರಮುಖ ಅಂಶಗಳು
- ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಪೂರೈಕೆ
- ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್
- ರಾಜ್ಯಾದ್ಯಂತ ಅಶಕ್ತರಿಗೆ ಗುಣಮಟ್ಟದ ಆಹಾರ ಪೂರೈಕೆಗೆ ಅಟಲ್ ಆಹಾರ ಕೇಂದ್ರ
- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ
- ರಾಜ್ಯದ ಪ್ರತೀ ವಾರ್ಡ್ಗಳಲ್ಲಿ ಅಟಲ್ ಆಹಾರ್ ಕೇಂದ್ರ ಸ್ಥಾಪನೆ
- ಡಬಲ್ ಇಂಜಿನ್ ಸರ್ಕಾರದಿಂದ ಮೂರು Eಗಳಿಗೆ ಆದ್ಯತೆ
- ಎಕಾನಮಿ, ಈಕ್ವಲ್ ಅಪಾರ್ಚುನಿಟಿ, ಎಂಪವರ್ಮೆಂಟ್
- ಆರ್ಥಿಕತೆ, ಸಮಾನ ಅವಕಾಶ, ಸಬಲೀಕರಣಕ್ಕೆ ಒತ್ತು
- ದಶಕಗಳಿಂದ ಬಾಕಿ ಉಳಿದಿರುವ ಮೂಲ ಸೌಕರ್ಯ ಕಾಮಗಾರಿಗಳು ಪೂರ್ಣ
- ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕ ನಂಬರ್ಒನ್ ರಾಜ್ಯ
- ಇದುವರೆಗೆ ಕರ್ನಾಟಕದಲ್ಲಿ ಜಿಮ್ ಮೂಲಕ 10 ಲಕ್ಷ ಕೋಟಿ ರೂ. ಹೂಡಿಕೆ
- ಪ್ರತಿ ಕುಟುಂಬಕ್ಕೆ ಪ್ರತೀ ತಿಂಗಳು 5 ಕೆಜಿ ಸಿರಿಧಾನ್ಯ ಪೂರೈಕೆ
- ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ನಂದಿನಿ ಹಾಲು
- ವಸತಿಹೀನರಿಗೆ 10 ಲಕ್ಷ ಮನೆ ನಿರ್ಮಾಣ ಘೋಷಣೆ
- ಏಕ ನಾಗರೀಕ ಸಂಹಿತೆ ಜಾರಿಗೆ ಭರವಸೆ
- ಕರ್ನಾಟಕ ಅಪಾರ್ಟ್‌ಮೆಂಟ್ ಓನರ್ ಶಿಪ್ ಆಕ್ಟ್ ತಿದ್ದುಪಡಿಗೆ ಭರವಸೆ
- ಒನಕೆ ಓಬವ್ವ ಯೋಜನೆಯಡಿ 10 ಸಾವಿರ ರೂಪಾಯಿ, 5 ವರ್ಷದ ಭವಿಷ್ಯ ನಿಧಿ
- ಸರ್ಕಾರಿ ಶಾಲೆಗಳ ಉನ್ನತೀಕರಣ ಭರವಸೆ