Wednesday, January 22, 2025

ದುಡ್ಡಿಂದ ಯಾರನ್ನು ಕೊಂಡುಕೊಳ್ಳೊಕೆ ಆಗಲ್ಲ : ಉಮಾಪತಿ ಶ್ರೀನಿವಾಸ್ ಗೌಡ

ಬೆಂಗಳೂರು : ದುಡ್ಡಿಂದ ಯಾರನ್ನು ಕೊಂಡುಕೊಳ್ಳೊಕೆ ಸಾಧ್ಯವಿಲ್ಲ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಪ್ರತಿಪಕ್ಷಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ಚುನಾವಣಾ ಪ್ರಚಾರವನ್ನು ಪ್ರಸನ್ನ ಗಂಗಾಧರೇಶ್ವರವ ದೇವಸ್ಥಾನದಿಂದ ಆರಂಭಿಸಿದರು. ಪೂಜೆ ಸಲ್ಲಿಸಿದ ಬಳಿಕ ಪವರ್ ವಿತ್ ಲೀಡರ್ ತಂಡದ ಜೊತೆ ಅವರು ಮಾತನಾಡಿದ್ದಾರೆ.

ಹೊಸ ಡಾಕ್ಟರ್ ಗಿಂತ ಹಳೇ ಪೇಶೇಂಟ್ ವಾಸಿ ಸ್ವಾಮಿ. ಯಾವುದೇ ಕಾರಣಕ್ಕೂ ಯಾರಿಗೂ ಭಯ ಪಡಬೇಡಿ. ನಿಮ್ಮ ಮೂಲಕ ಒಂದು ಸಂದೇಶ ಕೊಡ್ತಿದ್ದೀನಿ ದುಡ್ಡಿಂದ ಯಾರನ್ನು ಕೊಂಡುಕೊಳ್ಳೊಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕುಮಾರಸ್ವಾಮಿ ‘ವೀರನೂ ಅಲ್ಲ, ಶೂರುನೂ ಅಲ್ಲ..!’ : ಡಿ.ಕೆ ಶಿವಕುಮಾರ್

ನೀವು ಕೊಡುವ ಧೈರ್ಯವೇ ಸಾಕು

ನನಗೆ ನೀವು ಕೊಡುವ ಧೈರ್ಯವೇ ಸಾಕು. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣದೀಂದಲೇ ಐದು ಯೋಜನೆಗಳು ಜಾರಿಗೆ ಬರಲಿದೆ. ಅದಕ್ಕಾಗಿ ಕಾಂಗ್ರೆಸ್ ಗೆ ಮತ ನೀಡಿ ಅಂತಾ ಸ್ವಾಭಿಮಾನದ ನಡಿಗೆ- ಬದಲಾವಣೆಯ ಕಡೆಗೆ ಮೆರವಣಿಗೆಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಮತಯಾಚನೆ ಮಾಡಿದ್ದಾರೆ.

ಬದಲಾವಣೆ ಜಗದ ನಿಯಮ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮತ್ತು ಬದಲಾವಣೆಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಕು. ಹಾಲಿ ಶಾಸಕರು ಕೇವಲ ಉದ್ಯಮಿಗಳ ಶಾಸಕರಾಗಿದ್ದಾರೆ. ಕ್ಚೇತ್ರದಲ್ಲಿ ಈವರೆಗೆ ಏನು ಅಭಿವೃದ್ಧಿಯಾಗಿದೆ ಅನ್ನೋದು ಜನತೆಗೆ ಗೊತ್ತಿದೆ. ಬಿಜೆಪಿಯಿಂದ ಜನ ಬೇಸತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪರ ಜನರ ಒಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಡೆಪಾಳ್ಯ ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ಎಂ.ಆರ್ ಜಗದೀಶ್, ಜಯರಾಮ ರೆಡ್ಡಿ, ಹಲವು ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES