Monday, December 23, 2024

ಶಿಡ್ಲಘಟ್ಟ ಅಭಿವೃದ್ಧಿಯೇ ರಾಮಚಂದ್ರಗೌಡ್ರು ಕನಸು : ಸೀಕಲ್ ಆನಂದಗೌಡ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ರೀತಿಯಲ್ಲೇ ಶಿಡ್ಲಘಟ್ಟ ಅಭಿವೃದ್ಧಿಗೆ ಸೀಕಲ್ ರಾಮಚಂದ್ರಗೌಡರು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಆನಂದಗೌಡ ಅಭಿಪ್ರಾಯಪಟ್ಟರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರವಾಗಿ ಮುಖಂಡರಾದ ಸೀಕಲ್ ಆನಂದಗೌಡ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿರುವ ಅವರು, ದೇಶಕ್ಕೆ ನರೇಂದ್ರ ಮೋದಿ ನೀಡಿರುವ ಕೊಡುಗೆ ಅಪಾರವಾದದ್ದು. ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸಮಾಜ ನಿರ್ಮಾಣಕ್ಕಾಗಿ ಮತದಾರರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಬೇಕು. ಆ ಮೂಲಕ ಶಿಡ್ಲಘಟ್ಟ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

ರಾಮಚಂದ್ರಗೌಡ್ರುಕೈಬಲಪಡಿಸಿ

ದೇಶದ ಅಭಿವೃದ್ಧಿಯ ಬಗ್ಗೆ ಸದಾ ಕನಸು ಕಾಣುತ್ತಿರುವ ನರೇಂದ್ರ ಮೋದಿಯ ರೀತಿಯಲ್ಲಿ ಸೀಕಲ್ ರಾಮಚಂದ್ರಗೌಡರು ಶಿಡ್ಲಘಟ್ಟಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಕನಸು ಕಾಣುತ್ತಿದ್ದಾರೆ. ಅವರ ಕೈ ಬಲಪಡಿಸಿ ಕ್ಷೇತ್ರದ ಅಭಿವೃದ್ಧಿಗೆ ನೀವು ಬೆಂಬಲ ನೀಡಬೇಕು ಎಂದು ಆನಂದಗೌಡ ಅವರು ಮನವಿ ಮಾಡಿದರು.

ಇದನ್ನೂ ಓದಿ : ನಿಮ್ಮ ‘ಕೈ’ ಕೆಸರಿನಲ್ಲಿ ನಮ್ಮ ‘ಕಮಲ’ ಅರಳಿಸಿ : ಸೀಕಲ್ ರಾಮಚಂದ್ರಗೌಡ

ಅಭಿವೃದ್ಧಿ ಕಾರ್ಯ ನೋಡಿ ಆಶೀರ್ವದಿಸಿ

ದೇಶದ ಅಭಿವೃದ್ಧಿ, ಹಿಂದುತ್ವ, ಡಿಜಿಟಲ್ ಇಂಡಿಯಾ ಹಾಗೂ ಇಡೀ ಪ್ರಪಂಚದ ಉದ್ದಕ್ಕೂ ಭಾರತದ ಹೆಸರನ್ನು ಸಾರಿದಂತಹ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಪಕ್ಷಕ್ಕೆ ಆಶೀರ್ವದಿಸಬೇಕು. ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಯಾವುದೆ ಅಭಿವೃದ್ಧಿ ಆಗದೆ ಇದ್ದು, ಈ ಬಾರಿ ಕ್ಷೇತ್ರದ ಅಭಿವೃದ್ಧಿಗೆ ಸೀಕಲ್ ರಾಮಚಂದ್ರಗೌಡರು ಬಂದಿದ್ದಾರೆ. ಅವರ ಕೈ ಬಲಪಡಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಾಗಿದೆ ಎಂದರು.

ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೀಕಲ್ ಆನಂದಗೌಡ ಅವರು ಮತ ಪ್ರಚಾರ ನಡೆಸಿದರು. ನಾಚಗಾನಹಳ್ಳಿ, ಯೆರ್ರಹಳ್ಳಿ, ಕಡುಪಕುಂಟೆ, ಅಲಗುರ್ಕಿ, ರಾಯಪ್ಪನಹಳ್ಳಿ, ತಿಮ್ಮನಾಯಕನಹಳ್ಳಿ, ನಕ್ಕಲಹಳ್ಳಿ, ನಲ್ಲಜನಹಳ್ಳಿ, ಗೊರ್ಲಗುಮ್ಮನಹಳ್ಳಿ, ಗೋಣಿಮರದಹಳ್ಳಿ, ಜಿ.ಕೆ.ಹೊಸೂರು, ಕುರುಬರಹಳ್ಳಿ, ಚೊಕ್ಕನಹಳ್ಳಿ, ಬ್ರಾಹ್ಮಣರಹಳ್ಳಿ, ಗಂಗಹಳ್ಳಿ, ದೇವಗುಟ್ಟಹಳ್ಳಿ, ಗಂಜಿಗುಂಟೆ, ಹಳೆ ಗಂಜಿಗುಂಟೆ, ದೊಡ್ಡಬಂದರ ಘಟ್ಟ, ಚಿಕ್ಕಬಂದರಘಟ್ಟ, ಪುಲಕುಂಟಹಳ್ಳಿ, ಹಕ್ಕಿಬಿಕ್ಕಿ ಕಾಲೋನಿ, ಕ್ಯಾಸ ಕೆರೆ, ಬಾಳೆ ಗೌಡನ ಹಳ್ಳಿ, ವೇಮಗಲ್, ಕೊಂಡರಾಜನಹಳ್ಳಿ, ಪಲ್ಲಿಗಡ, ಲಕ್ಕೇನಹಳ್ಳಿ ಗ್ರಾಮಗಳಲ್ಲಿ ಮತ ಬೇಟೆ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಚಗಾನಹಳ್ಳಿ ಅಕ್ಕಲಪ್ಪ, ಯೆರ್ರಹಳ್ಳಿ  ನಾರಾಯಣಸ್ವಾಮಿ, ಕಡುಪಕುಂಟೆ ಶ್ರೀನಿವಾಸ್, ರಾಯಪ್ಪನ ಹಳ್ಳಿ ಶ್ರೀನಾಥ್, ತಿಮ್ಮನಾಯಕನಹಳ್ಳಿ ವೆಂಕಟ ರೆಡ್ಡಿ, ಅಲಗುರ್ಕಿ ಸುಬ್ಬಾ ರೆಡ್ಡಿ, ನಕ್ಕಲಹಳ್ಳಿ ಲಗುಮಪ್ಪ, ದಡಂ ಘಟ್ಟ ಪೆದ್ದೋಡು, ಗೊರ್ಲ ಗುಮ್ಮನಹಳ್ಳಿ ವೆಂಕಟರೆಡ್ಡಿ, ಲಗನಾಯಕನಹಳ್ಳಿ ಶಿವಣ್ಣ, ತೊಕಲಹಳ್ಳಿ ಶಿವಣ್ಣ, ಎಲ್ ಎನ್ ಹೊಸೂರು ಶಿವಣ್ಣ, ಗೋಣಿಮರದಹಳ್ಳಿ ಪ್ರಕಾಶ, ಜೆ ಕುರುಬರಹಳ್ಳಿ ನಾಗರಾಜು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES