Monday, August 25, 2025
Google search engine
HomeUncategorizedಕಾಂಗ್ರೆಸ್ ಗೆ 'ಬಸವಣ್ಣನವರ ಆದರ್ಶಗಳು' ಅರ್ಥವಾಗಿಲ್ಲ : ಪ್ರಧಾನಿ ಮೋದಿ

ಕಾಂಗ್ರೆಸ್ ಗೆ ‘ಬಸವಣ್ಣನವರ ಆದರ್ಶಗಳು’ ಅರ್ಥವಾಗಿಲ್ಲ : ಪ್ರಧಾನಿ ಮೋದಿ

ವಿಜಯಪುರ : ಕಾಂಗ್ರೆಸ್ ಸದಾ ಅಂಬೇಡ್ಕರ್ ಅವರನ್ನು ನಿಂದಿಸಿದೆ. ಕಾಂಗ್ರೆಸ್ ಎಂದೂ ದಲಿತ ಹಾಗೂ ತಳ ಸಮುದಾಯಗಳ ಕಾಳಜಿ ವಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ‘ಪಂಚನದಿಗಳ‌ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಪ್ರಧಾನಿ ಮೋದಿಯವರು ಭಾಷಣ ಆರಂಭಿಸಿದ್ದಾರೆ.

ನಾನು ಸ್ವಲ್ಪ ಸಮಯದ ಹಿಂದೆ ನಾನು ಶ್ರೀ ಬಸವೇಶ್ವರರ ಕರ್ಮ ಭೂಮಿಯಲ್ಲಿದ್ದೆ. ಈಗ ಶ್ರೀ ಬಸವೇಶ್ವರರ ಜನ್ಮಭೂಮಿಯಲ್ಲಿ ನಿಂತಿದ್ದೇನೆ. 2014ರಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ನಾನು ಬಂದಿದ್ದೆ. ಹೊಸ ವರ್ಷದ ಜೊತೆಗೆ ನಿಮ್ಮ ಆಶೀರ್ವಾದ ಕೂಡ ಸಿಕ್ಕಿತ್ತು ಎಂದು ನೆನಪಿಸಿಕೊಂಡರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿದ್ದೀರಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್, ಬಂಜಾರ ಹಾಗೂ ಲಂಬಾಣಿ ಸಮುದಾಯಗಳ ಕಾಳಜಿ ವಹಿಸಿಲ್ಲ ಎಂಬುದಕ್ಕೆ ನೀವೇ ಸಾಕ್ಷಿ. ಬಸವಣ್ಣನವರ ಆದರ್ಶಗಳು ಕಾಂಗ್ರೆಸ್ ಅರ್ಥವಾಗಿಲ್ಲ. ಬಸವೇಶ್ವರರಿಂದ ಪ್ರೇರಣೆಗೊಂಡು ನಮ್ಮ ಯೋಜನೆಗಳಲ್ಲಿ ಕಾಯಕ ಮತ್ತು ದಾಸೋಹಗಳನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು ಎಂದು ಹೇಳಿದ್ದಾರೆ.

ಹಿಂದುಳಿದವರ ಅಭ್ಯುದಯಕ್ಕೆ ಬಿಜೆಪಿ ಕಾರಣ

ಭಗವಾನ್‌ ಬಸವೇಶ್ವರ ಅವರು ಕರ್ಮ ಸಿದ್ದಾಂತ ಹಾಗೂ ದಾಸೋಹದ ತತ್ತ್ವ ಪಸರಿಸಿದರು. ಬಿಜೆಪಿ ಸರ್ಕಾರದ ಸ್ವಚ್ಛ ಆಡಳಿತ ಮತ್ತು ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಅವರದೇ ತತ್ತ್ವದ ಮೂಲದಲ್ಲಿದೆ.  ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭ್ಯುದಯಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ : ‘ಕೈ’ ಗ್ಯಾರೆಂಟಿ ಮೇ10ರ ಬಳಿಕ ಅದು ‘ಗಳಗಂಟಿ’ : ಸಿಎಂ ಬೊಮ್ಮಾಯಿ ಲೇವಡಿ

ಲಂಡನ್ ನಲ್ಲಿ ಬಸವಣ್ಣರ ಪುತ್ಥಳಿ

ದೇಶ ವಿದೇಶಗಳಲ್ಲಿ ಬಸವಣ್ಣನವರ ಆದರ್ಶಗಳನ್ನು ಪಸರಿಸುವ ಸೌಭಾಗ್ಯ ನನಗೆ ದೊರತಿದೆ. ಲಂಡನ್ ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಬಡವರಿಗೆ ಸಾಮಾಜಿಕ, ಆರ್ಥಿಕ ಸುರಕ್ಷತೆ ನೀಡಿದ್ದೇವೆ. ಬಡವರು, ರೈತರು, ಆದಿವಾಸಿಗಳು, ಮಹಿಳೆಯರು, ಹಿಂದುಳಿದ ವರ್ಗದವರಿಗೆ ಅವಕಾಶ ನೀಡಿದ್ದೇವೆ. ಇವರೆಲ್ಲರೂ ನಮ್ಮ ಪರಿವಾರದ ಸದಸ್ಯರು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಗರೀಬಿ ಹಠಾವೋ ಯೋಜನೆಯಿಂದ ಭ್ರಷ್ಟಾಚಾರಿಗಳಿಗೆ ಮಾತ್ರ ಲಾಭವಾಗಿದೆ. ಬಡತನ ನಿರ್ಮೂಲನೆ ಹೆಸರಲ್ಲಿ ಕಾಂಗ್ರೆಸ್‌ ನ ಭ್ರಷ್ಟಾಚಾರಿಗಳು ಮಾತ್ರ ಲಾಭ ಮಾಡಿಕೊಂಡಿದ್ದಾರೆ. ಕೇಂದ್ರದಿಂದ 1 ರೂ.ಬಿಡುಗಡೆ ಮಾಡಿದ್ದರೆ ಫಲಾನುಭವಿಗೆ 15 ಪೈಸೆ ಮಾತ್ರ ದೊರೆಯುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯವರೇ ಹೇಳಿದ್ದರು. ಭ್ರಷ್ಟಾಚಾರ ತೊಡೆದುಹಾಕಲು ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments