Wednesday, January 22, 2025

ಬಿಜೆಪಿಗೆ ‘ಜನ ಸೇವೆಯೇ ರಾಷ್ಟ್ರಸೇವೆ’ : ಪ್ರಧಾನಿ ಮೋದಿ

ಬೆಂಗಳೂರು : ಬಿಜೆಪಿಗೆ ಜನ ಸೇವೆಯೇ ರಾಷ್ಟ್ರಸೇವೆ. ಕರ್ನಾಟಕವನ್ನು ನವವಿಕಾಸದ ಕಡೆ ಕೊಂಡೊಯ್ಯಲು ಬಹುಮತದ ಬಿಜೆಪಿ ಸ್ಥಿರ ಸರ್ಕಾರ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಬೆಳಗಾವಿ ಜಿಲ್ಲೆ ಕೋಳಿಗುಡ್ಡ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಅವರು, ‘ಕುಡಚಿಯ ನನ್ನ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ದೇವಸ್ಥಾನಗಳ ಭೂಮಿಗೆ ಬಂದ ನನಗೆ ಅಪಾರ ಸಂತಸವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಭೂಮಿಗೆ ಬಂದಿದ್ದು ಸಂತಸ. ಅಪಾರಸಂಖ್ಯೆ ಕಾರ್ಯಕರ್ತರನ್ನು ಕಂಡು ಮನಸು ತುಂಬಿಬಂದಿದೆ. ಪೆಂಡಾಲ್​ ಹೊರಗೂ ಸಾಕಷ್ಟು ಜನರ ನೆರೆದಿದ್ದಾರೆ ಎಂದು ಹೇಳಿದರು.

ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ

ಕುಡಚಿ ಭೂಮಿಯ ವೀರ ಯೋಧರ ಶೌರ್ಯ ನೋಡಿದೆ. ವೀರ ಯೋಧರಾದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಶೌರ್ಯ ಪ್ರತಿ ರಾಷ್ಟ್ರ ಭಕ್ತರಲ್ಲಿ ಅಮರ ಪ್ರೇರಣೆ ಮೂಡಿಸುತ್ತದೆ. ಇಲ್ಲಿ ನೆರದಿರುವ ಜನಸ್ತೋಮವನ್ನು ಗಮನಿಸಿದರೆ ಬಿಜೆಪಿಗೆ ಗೆಲುವು ನಿಶ್ಚಿತ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಪ್ರಧಾನಿ ಮೋದಿ ವಿಶ್ವಗುರು, ಅದಕ್ಕೆ ‘ಕಾಂಗ್ರೆಸ್ ಗೆ ಭಯ’ : ಸಚಿವ ಡಾ.ಕೆ ಸುಧಾಕರ್

ಬಿಜೆಪಿಗೆ ಜನ ಸೇವೆಯೇ ರಾಷ್ಟ್ರಸೇವೆ

ಕರ್ನಾಟಕದಲ್ಲಿ ತಂತ್ರಜ್ಞಾನವೂ ಇದೆ, ಸಂಸ್ಕೃತಿಯೂ ಇದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯ ಅದ್ಭುತ ಮಾದರಿ ಸಿದ್ದವಾಗುತ್ತಿದೆ. ಇಲ್ಲಿ ಸಂಸ್ಕೃತಿ ಹಾಗೂ ಸ್ಟಾರ್ಟಪ್‌ಗಳು ಎರಡೂ ಏಕಕಾಲಕ್ಕೆ ಗಟ್ಟಿಗೊಳ್ಳುತ್ತದೆ. ಇಲ್ಲಿ ಪುರಾತನ ಮತ್ತು ಆಧುನಿಕ ಅಸ್ಮಿತೆಗಳೆರಡೂ ಬೆಳೆಯುತ್ತದೆ. ಇದು ಡಬಲ್‌ ಎಂಜಿನ್‌ ಸರ್ಕಾರದ ಮಾಡೆಲ್‌ ಕೂಡ ಹೌದು. ಬಿಜೆಪಿಗೆ ಜನ ಸೇವೆಯೇ ರಾಷ್ಟ್ರಸೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಜೆಡಿಎಸ್‌, ಕಾಂಗ್ರೆಸ್‌ ನಿಂದ ಕಾಲಹರಣ

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಕಾಲಹರಣ ಮಾಡಿತ್ತು. ರಾಜಕೀಯ ಅಸ್ಥಿರತೆಯಿಂದ ರಾಜ್ಯದ ಯುವಕರ ಭವಿಷ್ಯ ಚೂರು ಚೂರಾಯಿತು. ಭವ್ಯ ಭವಿಷ್ಯಕ್ಕಾಗಿ ಬಹುಮತದ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ. ಕಾಂಗ್ರೆಸ್ ಎಂದೂ ಬಹುಸಂಖ್ಯಾತ ಸಮುದಾಯವಾದ ಬಂಜಾರ ಸಮುದಾಯಗಳ ಕಾಳಜಿಯನ್ನು ವಹಿಸಿರಲಿಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಮೇಲೆ ವಿಶೇಷ ನಿಗಮ ಸ್ಥಾಪಿಸಿದ್ದೇವೆ. ತಾಂಡಾ ಮತ್ತು ಕುರುಬರಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನ ನೀಡಿ ಅವರಿಗೆ ಹಕ್ಕುಪತ್ರಗಳನ್ನು ನೀಡಿದ್ದೇವೆ ಎಂದು ಪ್ರತಿಪಕ್ಷಗಳ ವಿರುದ್ಧ ಗಡುಗಿದರು.

ಬರುವ ಮೇ 10ರಂದು ನೀವು ವೋಟ್‌ ಮಾಡುವುದು ಕರ್ನಾಟಕವನ್ನು ನಂ.1 ಮಾಡುವುದಕ್ಕಾಗಿ. ಡಬಲ್‌ ಎಂಜಿನ್‌ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನೀವು ಮತ ನೀಡಲಿದ್ದೀರಿ. ಕರ್ನಾಟಕ ನನಗೆ ಬಹುಮುಖ್ಯ ರಾಜ್ಯ. ಹಾಗಾಗಿ ನಿಮ್ಮ ಆಶೀರ್ವಾದ ಬೇಡಲು ಬಂದಿದ್ದೇನೆ ಎಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದರು.

RELATED ARTICLES

Related Articles

TRENDING ARTICLES