Wednesday, January 22, 2025

ಕುಮಾರಸ್ವಾಮಿ ‘ವೀರನೂ ಅಲ್ಲ, ಶೂರುನೂ ಅಲ್ಲ..!’ : ಡಿ.ಕೆ ಶಿವಕುಮಾರ್

ಬೆಂಗಳೂರು : ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರುನು ಅಲ್ಲ..! ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಬಿಜೆಪಿ ದೂರ ಇಡಲು ಸಮ್ಮಿಶ್ರ ಸರ್ಕಾರ ಮಾಡಿದ್ವಿ. ಜೆಡಿಎಸ್ ಗೆದ್ದಿದ್ದು ಕೇವಲ 38 ಸೀಟು, ನಾವು 80 ಸೀಟು ಗೆದ್ದಿದ್ವಿ. ನಾವು 80 ಜನ ಶರಣಾಗಿ ನೀನು ಆಡಳಿತ ಮಾಡಪ್ಪ ಅಂತ ಕುಮಾರಸ್ವಾಮಿಗೆ ಬೆಂಬಲ ಕೊಟ್ಟರು ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಎಚ್.ಕೆ.ಕುಮಾರಸ್ವಾಮಿ ಹೇಳ್ತಾರೆ ‘ನನ್ನನ್ನು ರಬ್ಬರ್ ಸ್ಟಾಂಪ್’ ತರ ಇಟ್ಕೊಂಡಿದ್ದಾರೆ ಅಂತಾ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರಾ? ರೇವಣ್ಣ ಮಂತ್ರಿ ಆಗ್ತಾರಾ? ಆಗಲ್ಲ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರುನು ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ‘ಬಸವಣ್ಣನವರ ಆದರ್ಶಗಳು’ ಅರ್ಥವಾಗಿಲ್ಲ : ಪ್ರಧಾನಿ ಮೋದಿ

ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ

ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಕೆಲಸಕ್ಕೆ ಬಂದಂಗೆ. 1989ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ವಿರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜು ಅರಸು ಮಖ್ಯಮಂತ್ರಿಯಾಗಿದ್ದಾಗ ಉಳುವವನಿಗೆ ಭೂಮಿ ಕೊಟ್ಟರು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವ್ರು ಒಂದು ಸಣ್ಣ ಯೋಜನೆ ತಂದ್ರಾ?

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಒಂದು ಸಣ್ಣ ಯೋಜನೆ ತಂದಿದ್ದಾರಾ? ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿ ಯಾವುದು ಮಾಡಿದ್ದೀರಿ. ಅಚ್ಚೇ ದಿನ ಬರುತ್ತೆ ಅಂತ ಹೇಳಿದ್ರು. ಗ್ಯಾಸ್, ಎಣ್ಣೆ, ಗೊಬ್ಬರ, ಬಿತ್ತನೆ ಬೀಜದ ಬೆಲೆ ಜಾಸ್ತಿ ಆಯ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ದೀಕ್ಷೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES