Wednesday, January 22, 2025

‘ಕೈ’ ಗ್ಯಾರೆಂಟಿ ಮೇ10ರ ಬಳಿಕ ಅದು ‘ಗಳಗಂಟಿ’ : ಸಿಎಂ ಬೊಮ್ಮಾಯಿ ಲೇವಡಿ

ಬೆಂಗಳೂರು : ಕಾಂಗ್ರೆಸ್ ಈಗ ಗ್ಯಾರೆಂಟಿ ಕೊಡುತ್ತಿದೆ. ಅದು ಮೇ10 ವರೆಗೆ ಮಾತ್ರ ಗ್ಯಾರೆಂಟಿ ಮೇಲೆ ಅದು ಗಳಗಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಶಹಾಪುರ ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಲು ಅಮಿನ್ ರೆಡ್ಡಿ ಅವರನ್ನು ಗೆಲ್ಲಿಸಿ. ನವ ಕರ್ನಾಟಕ ನಿರ್ಮಾಣ ಮಾಡಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ, ಖರ್ಗೆ ಬರಲಿ ಯಾರೇ ಬರಲಿ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ. ಕಾಂಗ್ರೆಸ್ ನವರು ಇಷ್ಟು ವರ್ಷ ಸುಳ್ಳು ಮೋಸಗಳಿಂದ ಅಧಿಕಾರ ನಡೆಸಿದ್ದಿರಿ. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಎಲ್ಲ ಲಿಂಗಾಯತರು ಭ್ರಷ್ಟರೇ?

ಎಲ್ಲ ಲಿಂಗಾಯತರು ಭ್ರಷ್ಟರು ಅಂದರೆ ಒಪ್ಪಲು ಸಾಧ್ಯವೆ? ಲಿಂಗಾಯತರು ಭಿಕ್ಷುಕರಲ್ಲ. ಅವರು ಅವರ ಹಕ್ಕು ಕೇಳಿದ್ದಾರೆ. ಅದನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ‌. ಅದನ್ನು ಮುಟ್ಟಿ ನೋಡಿ ಎಂದು ಸಿಎಂ ಬೊಮ್ಮಾಯಿ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ : ‘ಬಿಜೆಪಿ ಗ್ಯಾರಂಟಿ’ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಕೈಗೆ ಭಯ ಶುರುವಾಗಿದೆ

ಸ್ವಾತಂತ್ರ್ಯ ಬಂದ ಮೇಲೆ ದೇಶ ಒಡೆದಿರಿ. ಈಗ ಸಮಾಜ ಒಡೆಯುವ ಕೆಲಸ ಮಾಡಿದ್ದೀರಿ‌. ಎಲ್ಲ ಸಮಾಜಗಳನ್ನು ಸಣ್ಣ ಸಣ್ಣ ಸಮಾಜಗಳಾಗಿ ಒಡೆದಿರಿ. ಎಸ್ಸಿ ಎಸ್ಟಿ ಸಮಾಜದವರ ಮೂವತ್ತು ವರ್ಷದಿಂದ ಮೀಸಲಾತಿ ಹೆಚ್ಚಳ ಮಾಡಲು ಮನವಿ ಮಾಡಿದ್ದರು. ಆದರೆ, ಕಾಂಗ್ರೆಸ್ ನವರು ಮಾಡಲಿಲ್ಲ. ಅವರಿಗೆ ಆಸೆ ತೋರಿಸುತ್ತ ಬಂದರು. ನಾನು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ನಾನು ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES