Monday, December 23, 2024

ತಂದೆ ‘ಜಯರಾಮ್ ಹೆಸರೇ ನನಗೆ ಶ್ರೀರಕ್ಷೆ’ : ಅಶೋಕ್ ಜಯರಾಮ್

ಬೆಂಗಳೂರು : ನಮ್ಮ ತಂದೆ, ಮಾಜಿ ಸಚಿವ ಜಯರಾಮ್ ಅವರ ಹೆಸರೇ ನನಗೆ ಶ್ರೀರಕ್ಷೆಯಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅಭಿಪ್ರಾಯ ಪಟ್ಟರು.

ಮಂಡ್ಯ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಇಂದು ಅಶೋಕ್ ಜಯರಾಮ್ ಅವರು ಪ್ರಚಾರ ಕೈಗೊಂಡು ಮತಯಾಚನೆ ನಡೆಸಿದರು. ಈ ವೇಳೆ ಪವರ್ ವಿತ್ ಲೀಡರ್ ತಂಡದ ಜೊತೆ ಅವರು ಮಾತನಾಡಿದರು.

ಚುನಾವಣೆ ಬಂದಾಗ ಮಂಡ್ಯದ ಜನರು ಹೆಚ್ಚಾಗಿ ಭಾವನಾತ್ಮಕ ಸ್ಥಿತಿಗೆ ಬಂದು ತಲುಪುತ್ತಾರೆ. ಎಸ್.ಟಿ. ಜಯರಾಮ್ ಕೊಡುಗೆ ಅಪಾರ. ನಮ್ಮ ತಂದೆಯ ಹೆಸರು ನನಗೆ ಶ್ರೀರಕ್ಷೆಯಾಗಿದೆ. ಸಾಮಾಜಿಕವಾಗಿ ನಾವು ಜನರ ಜೊತೆ ನಿಕಟವರ್ತಿಯಾಗಿರೊದ್ರಿಂದ ಈ ಸಲ ವ್ಯಕ್ತಿಗತವಾಗಿ ಬೆಂಬಲಿಸಿ ಬಿಜೆಪಿಗೆ ಮಂಡ್ಯ ಕ್ಷೇತ್ರದ ಜನ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿಅಶೋಕ್ ಜಯರಾಮ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಬೇಡ : ಸುಮಲತಾ ಅಂಬರೀಶ್

ಯುವ ನಾಯಕರ ಅವಶ್ಯಕತೆಯಿದೆ

ಮಾಜಿ ಸಚಿವ ಜಯರಾಂ ಅವರು ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಇಂದಿಗೂ ನಾವು ನೆನಪಿಸಿಕೊಳ್ತೇವೆ. ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕಾದ್ರೆ ಯುವ ನಾಯಕರ ಅವಶ್ಯಕತೆಯಿದೆ. ಕೇಂದ್ರದಲ್ಲೂ ಬಿಜೆಪಿಯಿದೆ, ರಾಜ್ಯ ಮತ್ತು ಮಂಡ್ಯದಲ್ಲಿ ಬಿಜೆಪಿ ಗೆದ್ರೆ, ಖಂಡಿತವಾಗಿಯೂ ನಿರೀಕ್ಷೆಯಂತೆ ಅಭಿವೃದ್ಧಿಯಗಲಿದೆ ಎಂದು ಹೇಳಿದರು.

ಮಾವನ ಸೇವೆ ನೆನೆದು ಭಾವುಕರಾಗ್ತಿದ್ದಾರೆ

ಅಶೋಕ್ ಜಯರಾಮ್ ಅವರ ಪತ್ನಿ ಡಾ.ಅಕ್ಷತಾ ಮಾತನಾಡಿ, ತಮ್ಮ ಪತಿ ಮಂಡ್ಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನಾನು ಕೂಡ ಪ್ರಚಾರ ಕಾರ್ಯ ನಡೆಸುತ್ತಿದ್ದೇನೆ. ಪ್ರಚಾರಕ್ಕೆ ಹೋದಲ್ಲೆಲ್ಲ ನಮ್ಮ ಮಾವ ಜಯರಾಮ್ ಮಾಡಿರುವ ಸೇವೆ ನೆನೆಸಿಕೊಂಡು ಭಾವುಕರಾಗುತ್ತಿದ್ದಾರೆ. ನಮ್ಮ ಯಜಮಾನ್ರಿಗೇನೆ ವೋಟ್ ಹಾಕೊದು ಅಂತಾ ಇಡೀ ಕ್ಷೇತ್ರದ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಅಂದ್ರೆ ಅಭಿವೃದ್ಧಿ. ಹಾಗಾಗಿ ಬಿಜೆಪಿಯೇ ಭರವಸೆ ಅಂತಾ ಹೆಸರಿಡಲಾಗಿದೆ. ಎಸ್ .ಟಿ. ಜಯರಾಮ್ ಅವರು ನಿಧನರಾಗಿ 25 ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬೆಂಗಳೂರು ಸುತ್ತಲ ಜಿಲ್ಲೆಗಳು ಹೆಚ್ಚಾಗಿ ಅಭಿವೃದ್ಧಿಯಾಗಿವೆ. ಮಂಡ್ಯ ಅಭಿವೃದ್ಧಿಗಾಗಿ ಅಶೋಕ್ ಜಯರಾಮ್ ಅವರಿಗೆ ಮತ ನೀಡಬೇಕು ಎಂದು ಮತದಾರರು ಅಭಿಪ್ರಾಯ ಪಟ್ಟರು.

RELATED ARTICLES

Related Articles

TRENDING ARTICLES