Sunday, January 19, 2025

‘ಬಿಜೆಪಿ ಗ್ಯಾರಂಟಿ’ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡುತ್ತಿರುವ ಬಿಜೆಪಿ ನಾಯಕರಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.

ಮಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ 5ನೇ ಗ್ಯಾರಂಟಿ ಘೋಷಿಸಿದರು. ಈ ಬಗ್ಗೆ ಬಿಜೆಪಿ ವ್ಯಂಗ್ಯವಾಡಿತ್ತು.

ಇದೀಗ ಬಿಜೆಪಿ ಗ್ಯಾರಂಟಿಗಳನ್ನು ಪಟ್ಟಿ ಮಾಡಿ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಕಾಂಗ್ರೆಸ್ ಗ್ಯಾರಂಟಿಗಳು

  • 200 ಯೂನಿಟ್ ಉಚಿತ ವಿದ್ಯುತ್
  • 10 ಕೆಜಿ ಅಕ್ಕಿ
  • ನಿರುದ್ಯೋಗಿಗಳಿಗೆ ಸಹಾಯಧನ
  • ಮಾಸಿಕ 2,000 ರೂ.
  • ಮಹಿಳೆಯರಿಗೆ ಉಚಿತ ಪ್ರಯಾಣ

ಇದನ್ನೂ ಓದಿ : ಡಿಕೆಶಿ ನೋಡಿದ್ರೆ ಯಾರು ವೋಟ್ ಹಾಕುತ್ತಾರೆ : ಅಶ್ವತ್ಥನಾರಾಯಣ ಲೇವಡಿ

ಬಿಜೆಪಿ ಗ್ಯಾರಂಟಿಗಳು

  • ಗಲಭೆ ಗ್ಯಾರಂಟಿ
  • 40% ಕಮಿಷನ್ ಗ್ಯಾರಂಟಿ
  • ಹುದ್ದೆಗಳ ಮಾರಾಟ ಗ್ಯಾರಂಟಿ
  • ಇನ್ನಷ್ಟು ಬೆಲೆ ಏರಿಕೆ ಗ್ಯಾರಂಟಿ
  • ಕರ್ನಾಟಕದ ಲೂಟಿ ಗ್ಯಾರಂಟಿ

ಪಿಎಸ್ಐ ಹಗರಣ, ಸಹಾಯಕ ಪ್ರಾಧ್ಯಾಪಕ ಹಗರಣ, ಸಹಾಯಕ ಎಂಜಿನಿಯರ್ ಹಗರಣ, ಮೈಸೂರು ಸ್ಯಾಂಡಲ್ ಸೋಪ್ ಹಗರಣ. ಅದು ಶಾಸಕರಾಗಿರಲಿ, ಕಾರ್ಖಾನೆಯಾಗಲಿ, ಉದ್ಯೋಗವಿರಲಿ. ಬಿಜೆಪಿಯವರಿಗೆ ಕಳ್ಳತನ ಮಾಡುವುದು ಅಭ್ಯಾಸವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ‘40% ಕಮಿಷನ್’ ಬಿಜೆಪಿ ಸರ್ಕಾರ ಕೆಳಗಿಳಿಯಲಿದೆ. ‘5 ಗ್ಯಾರಂಟಿಗಳ’ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES