Wednesday, January 22, 2025

ನಟ ಸುದೀಪ್, ದರ್ಶನ್ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತನಾಡಿರುವ ಅವರು, ನಟ ಸುದೀಪ್ ಹಾಗೂ ದರ್ಶನ್ ಅವರು ಯಾವ ಪಕ್ಷವನ್ನೂ ಸೇರಿಲ್ಲ. ಅವರು ಸಿನಿಮಾ ನಟರು ಹಾಗೂ ಸ್ನೇಹಿತರು ಎಂದು ಡಿಕೆಶಿ ಹೇಳಿದ್ದಾರೆ. ದರ್ಶನ್ ಹಾಗೂ ಸುದೀಪ್ ಅವರು ಕಾಂಗ್ರೆಸ್ ನಾಯಕರ ಪರವಾಗಿಯೂ ಪ್ರಚಾರ ಮಾಡ್ತೇವೆ ಎಂದಿದ್ದಾರೆ. ಯಲಹಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಈಗಾಗಲೇ ಪ್ರಚಾರ ಮಾಡಿದ್ದಾರೆ. ಸುದೀಪ್ ಕೂಡಾ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಬಹುದು ಎಂದು ತಿಳಿಸಿದ್ದಾರೆ.

ಇಬ್ಬರೂ ಉತ್ತಮ ಸ್ನೇಹಿತರು. ನಾನು ಸುದೀಪ್ ಭೇಟಿಯಾದ ಸಂದರ್ಭದಲ್ಲಿ ಏನು ಮಾತುಕತೆ ಆಗಿದೆ ಎಂಬುದು ನಮಗೆ ಗೊತ್ತು. ಅದನ್ನು ಹೇಳಲು ಆಗುತ್ತಾ? ಅವರು ಡಿ.ಕೆ ಶಿವಕುಮಾರ್ ಕೂಡಾ ಸ್ನೇಹಿತ ಅಂದಿದ್ದಾರಲ್ವಾ? ದರ್ಶನ್ ಹಾಗೂ ಸುದೀಪ್ ಇಬ್ಬರೂ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ದೊಡ್ಡ ಬಲೆ ಹಾಕಿ ಗೀತಾರನ್ನು ಬೀಳಿಸಿದ್ದೇನೆ : ಡಿ.ಕೆ ಶಿವಕುಮಾರ್

ಬಿಜೆಪಿ ಪರ ಕುಚಿಕುಗಳ ಪ್ರಚಾರ

ನಟ ದರ್ಶನ್ ಇಂದು ಬಿಜೆಪಿ ಪರ ರೋಡ್ ಶೋ ಆರಂಭಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿರುವ ನಟ ದರ್ಶನ್ ಅವರು ಕೆಜಿ ಎಫ್, ಬಂಗಾರಪೇಟೆ, ಕೋಲಾರ, ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ (ವಿಜಯಪುರ), ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ನಟ ಸುದೀಪ್ ಅವರು ಇಂದು ಹುಬ್ಬಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್​ ಟೆಂಗಿನಕಾಯಿ ಪರ ಪ್ರಚಾರ ನಡೆಸಿದ್ದಾರೆ. ಬಳಿಕ ಕಲಘಟಗಿ, ಧಾರವಾಡ ನಗರ, ಗದಗದಲ್ಲಿ ರೋಡ್ ಶೋ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES