Sunday, February 25, 2024

ಕನ್ನಡಿಗರು ‘ಕುವೆಂಪು ಪದ್ಯಗಳನ್ನೂ ಓದುತ್ತಾರೆ, ಕವಿತೆ’ನೂ ಬರೆಯುತ್ತಾರೆ : ಪ್ರಧಾನಿ ಮೋದಿ

ಬೆಂಗಳೂರು : ‘ಕನ್ನಡಿಗರು ಕುವೆಂಪು ಅವರ ಪದ್ಯಗಳನ್ನೂ ಓದುತ್ತಾರೆ ಹಾಗೂ ಕವಿತೆನೂ ಬರೆಯುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜ್ಯ ವಿಧಾನಸಭೆ ಚುನಾವಣೆ ರೂಪುರೇಷೆಗಳ ಕುರಿತು ಕಾರ್ಯಕರ್ತರ ನಡುವೆ ನಡೆಸಿದ ಸಂವಾದದಲ್ಲಿ ಪ್ರಧಾನಿ ಮೋದಿ ಕನ್ನಡಿಗರನ್ನು ಹಾಡಿ ಹೊಗಳಿದರು.

ಕರ್ನಾಟಕ ಹನುಮನ ಜನ್ಮಸ್ಥಳವಾಗಿದೆ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧಿ ಹೊಂದಿದ ನಾಡಾಗಿದೆ. ಇಲ್ಲಿನ ಆಧ್ಯಾತ್ಮಿಕತೆಗೂ ಯಾರೂ ಸಾಟಿಯಿಲ್ಲ. ಇಲ್ಲಿನ ಭಾಷೆ, ಸಾಹಿತ್ಯ ತುಂಬಾ ಹೆಸರುವಾಸಿ. ಕನ್ನಡಿಗರು ಕೋಡಿಂಗ್‌ ಬರೆಯುತ್ತಾರೆ. ಕುವೆಂಪು ಅವರ ಪದ್ಯಗಳನ್ನೂ ಓದುತ್ತಾರೆ ಎಂದು ತಿಳಿಸಿದರು.

ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೆ

ಕನ್ನಡ ಭಾಷೆ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದ ಜನರನ್ನು ದಶಕದಿಂದಲೂ ನಾನು ನೋಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಕನಕದಾಸರು, ಶಿವ ಶರಣರ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಿಸಿದರು.

ಇದನ್ನೂ ಓದಿ : ಪ್ರಧಾನಿ ‘ಮೋದಿ ದಿಲ್ ಕದ್ದ’ ಕನ್ನಡದ ಪೋರಿ

ಕನ್ನಡಿಗರು ಭಕ್ತಿಯ ಶಕ್ತಿ ವಿನಿಯೋಗಿಸ್ತಾರೆ

ಕನ್ನಡದ ಜನರ ಆಧ್ಯಾತ್ಮಿಕತೆಯಂತೆ ಮತ್ತೊಂದಿಲ್ಲ. ಇಲ್ಲಿ ಆಧ್ಯಾತ್ಮ ಮತ್ತು ಸಾಮಾಜಿಕ ಅಭ್ಯುದಯ‌ಗಳೆರಡೂ ಜತೆಜತೆಗೇ ಸಾಗುತ್ತವೆ. ಸಮಾಜ ಒಗ್ಗೂಡಿಸಿಕೊಂಡು ಹೋಗಲು ಆಧಾತ್ಮಿಕತೆ ಪ್ರಮುಖ ಪಾತ್ರ ವಹಿಸಿದೆ. ಸಮಾಜ ಸುಧಾರಣೆಗಾಗಿ ಕನ್ನಡದ ಜನ ಭಕ್ತಿಯ ಶಕ್ತಿ ವಿನಿಯೋಗಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ಹಲವು ರಂಗಗಳಲ್ಲಿ ಪ್ರಗತಿ ಹೊಂದಿದ ರಾಜ್ಯವಾಗಿದೆ. ನವೋದ್ಯಮದಲ್ಲಿ ಜಾಗತಿಕವಾಗಿ ದೊಡ್ಡ ಹೆಸರು ಮಾಡಿದೆ. ಕರುನಾಡ ಜನರು ಡಬಲ್‌ ಎಂಜಿನ್‌ ಸರ್ಕಾರದ ಲಾಭ ಪಡೆದಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಅಂದರೆ ಎಲ್ಲಾ ಯೋಜನೆಗಳಲ್ಲೂ ವೇಗ ಕಾಣಬಹುದು‌. ಬಿಜೆಪಿಯೇತರ ಸರ್ಕಾರಗಳು ಅವರ ಅನುಕೂಲಗಳಿಗಾಗಿ ಈ ಯೋಜನೆಗಳನ್ನು ಬದಲಾಯಿಸುತ್ತಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.

RELATED ARTICLES

Related Articles

TRENDING ARTICLES