Wednesday, January 22, 2025

‘ಕೌರವ ಪಾಟೀಲ್’ ಪರ ನಟ ಸುದೀಪ್ ಅಬ್ಬರದ ಪ್ರಚಾರ

ಹಾವೇರಿ : ಕೃಷಿ ಸಚಿವ ಹಾಗೂ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಪರ ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಇಂದು ಅಬ್ಬರದ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಹಿರೇಕೆರೂರು ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ಸರ್ವಜ್ಞ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ನಟ ಸುದೀಪ್ ಅವರ ಅಭಿಮಾನಿಗಳು ಭಾಗವಹಿಸಿದ್ದರು. ಕಿಚ್ಚ ಸುದೀಪ ಆಗಮನದ ಹಿನ್ನೆಲೆಯಲ್ಲಿ ಬಿಸಿಲನ್ನೂ ಲೆಕ್ಕಿಸದೇ ರಸ್ತೆಯುದ್ದಕ್ಕೂ ಜನರು ನೆರೆದಿದ್ದರು. ಎಲ್ಲೆಡೆ ಬಿ.ಸಿ ಪಾಟೀಲ್​ ಹಾಗೂ ಸುದೀಪ್​ಗೆ ಜೈಕಾರಗಳು ಕೇಳಿ ಬಂದವು.

ಕಿಚ್ಚ ಸುದೀಪ್ ಪ್ರಚಾರ ಬಳಿಕ ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿ.ಸಿ ಪಾಟೀಲ್ ಅವರು, ಸುದೀಪ್ ಅಭಿಮಾನಿಗಳು ತುಂಬಾ ಜನ ಬಂದಿದ್ದರು. ಕಿಚ್ಚ ಸುದೀಪ್ ನನ್ನ ಪರ ಮತಯಾಚನೆ ಮಾಡಿದರು. ಸುದೀಪ್ ಅವರು 1 ಗಂಟೆಗೂ ಹೆಚ್ಚು ಕಾಲ ರೋಡ್ ಶೋ ನಲ್ಲಿ ಭಾಗಿಯಾದರು.

ನನ್ನ ಅಭಿವೃದ್ಧಿ ಕೆಲಸ ಕುರಿತು ಹೇಳಿ ಜನರ ಬಳಿ ಮತಬೇಟಿ ಮಾಡಿದರು. ಉಪ ಚುನಾವಣೆ ಬಳಿಕ ಈಗ ಜನರಲ್ಲಿ ಉತ್ಸಾಹ ಹೆಚ್ಚಿದೆ. ಈ ಬಾರಿ ಹಿರೇಕೆರೂರು ಜನತೆ ನನಗೆ ಹೆಚ್ಚು ಬೆಂಬಲ ನೀಡುತ್ತಾರೆ. ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಹಿರೇಕೆರೂರಲ್ಲಿ ‘ಕೌರವ ಪಾಟೀಲ್’ ಭರ್ಜರಿ ಮತ ‘ಶಿಕಾರಿ’

ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಫರ್ಧೆ

ಮಹಳೆಯರು ಇಷ್ಟೊಂದು ಸಂಖ್ಯೆಯಲ್ಲಿ ಪ್ರಚಾರಕ್ಕೆ ಬರಲ್ಲ. ಆದರೆ, ಇಂದು ಹಿರೇಕೆರೂರು ಮತಕ್ಷೇತ್ರದ ಮಹಿಳೆಯರು ಉತ್ಸಾಹದಿಂದ ರೋಡ್ ಶೋನಲ್ಲಿ ಭಾಗಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವೆ. ಉಪ ಚುನಾವಣೆ ನಂತರ ಜನ ಅಭಿವೃದ್ಧಿ ಕೆಲ ಕಂಡು ಮತ ನೀಡ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

ಇದಕ್ಕೂ ಮೊದಲು ಸಚಿವ ಬಿ.ಸಿ ಪಾಟೀಲ್ ಅವರು, ಹಿರೇಕೆರೂರು ಮತಕ್ಷೇತ್ರದ ಆಲದಕಟ್ಟಿ ಗ್ರಾಮಕ್ಕೆ ಇಂದು ಭೇಟಿ ನೀಡಿ, ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಆರ್.ಎನ್ ಗಂಗೊಳ, ಲಿಂಗರಾಜ ಚಪ್ಪರದಳ್ಳಿ, ಗಂಗಾಧರ್, ಸೃಷ್ಟಿ ಪಾಟೀಲ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES