ಬೆಂಗಳೂರು : ಮಂಡ್ಯದಲ್ಲಿ ನಿನ್ನೆ ನಡೆದ ಬಿಜೆಪಿ ಸಮಾವೇಶದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಯಾರೋ ‘ನಾನೇ ಸಿಎಂ ಆಗಬೇಕು’ ಅಂತ ಕನಸು ಕಾಣ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಮಲತಾ ಬಗ್ಗೆ ಟೀಕೆ ಮಾಡುವಷ್ಟು ವ್ಯಕ್ತಿತ್ವ ಬೆಳೆಸಿಕೊಂಡಿಲ್ಲ ಎಂದು ಕುಟುಕಿದ್ದಾರೆ. ಸುಮಲತಾ ಅವರೇ ಜೆಡಿಎಸ್ನವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾನ್ಯಾಕೆ ಸುಮಲತಾ ಬಗ್ಗೆ ಟೀಕೆ ಮಾಡಲಿ. ದೊಡ್ಡವರ ಬಗ್ಗೆ ಟೀಕೆ ಮಾಡುವಷ್ಟು ನಾನು ದೊಡ್ಡವನಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿಯೇ ತಿರುಗೇಟು ನೀಡಿದ್ದಾರೆ.
ಸುಮಲತಾ ಹೇಳಿದ್ದೇನು?
ಯಾರೋ ಕನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರಲಿ, ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ. ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಒಂದು ಕುಟುಂಬದವರನ್ನು ಬೆಂಬಲಿಸಿದ್ದೀರಾ. ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ? ಎಂದು ಯೋಚಿಸಿ ಎಂದು ಎಚ್.ಡಿ ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟಿದ್ದರು.
ಇದನ್ನೂ ಓದಿ : ‘ದೇವೇಗೌಡ್ರು ಆಶೀರ್ವಾದ’ ಮಾಡಿ ಕಳುಹಿಸಿರೋನು ‘ನನ್ನ ಮಗ ಸ್ವರೂಪ್’ : ಭವಾನಿ ರೇವಣ್ಣ
62 ಕಡೆ ಜೆಡಿಎಸ್ ಕಾರ್ಯಕ್ರಮ
ನಾಳೆಯಿಂದ ಮೇ 8ರವರೆಗೆ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದೆ. ವಾರದಲ್ಲಿ ಒಂದು ದಿನ ಆರೋಗ್ಯದ ಕಾರಣ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾಮ ಪಂಚಾಯಿತಿ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.