Monday, December 23, 2024

ಭಾರೀ ಸಂಕಷ್ಟದಲ್ಲಿ ಆರ್​ಸಿಬಿ : ಚಿನ್ನಸ್ವಾಮಿಯಲ್ಲಿ ‘ಕಿಂಗ್ ಕೊಹ್ಲಿ’ ಮತ್ತೊಂದು ದಾಖಲೆ

ಬೆಂಗಳೂರು : ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಕೆಕೆಆರ್ ತಂಡ ನೀಡಿರುವ 201 ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಆರ್​ಸಿಬಿ ಪ್ರಮುಖ ಎಂಟು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮತ್ತೊಂದು ಕಡೆ ಏಕಾಂಗಿಯಾಗಿ ಹೋರಾಡುತ್ತಿದ್ದ ವಿರಾಟ್ ಕೊಹ್ಲಿ, ಆಕರ್ಷಕ ಅರ್ಧಶತಕ 54(37)ಬಾರಿಸಿ ಔಟಾದರು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಹೆಸರಿಗೆ ಮತ್ತೊಂದು ದಾಖಲೆ ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲೇ 3 ಸಾವಿರ ರನ್

ಐಪಿಎಲ್ ಇತಿಹಾಸದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಯಾವುದೇ ಬ್ಯಾಟರ್ ಮಾಡಿರದ ಸಾಧನೆಯೊಂದನ್ನು ಕೊಹ್ಲಿ ಮಾಡಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3,000 ರನ್ ಪೂರೈಸಿದ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಭಾಜನರಾಗಿದ್ದಾರೆ. ಈ ಮೊದಲು ಒಂದೇ ಕ್ರೀಡಾಂಗಣದಲ್ಲಿ 2,500 ರನ್ ಪೂರೈಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಕೊಹ್ಲಿ ಹೆಸರಿನಲ್ಲಿತ್ತು.

ಇದನ್ನೂ ಓದಿ : ತಲಾ ಧೋನಿ ಹೊಸ ಮೈಲುಗಲ್ಲು : ಈ ಸಾಧನೆ ಮಾಡಿದ ಮೊದಲ ನಾಯಕ ಇವರೇ!

ಭಾರೀ ಸಂಕಷ್ಟದಲ್ಲಿ ಆರ್​ಸಿಬಿ

ಕೆಕೆಆರ್ ನೀಡಿದ್ದ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಮೊದಲ ಎರಡು ಓವರ್​ನಲ್ಲಿ 30 ರನ್ ಬಾರಿಸಿತು. ಬಳಿಕ, ಕೆಕೆಆರ್ ಬೌಲರ್​ಗಳಿ ಆರ್​ಸಿಬಿ ಬ್ಯಾಟರ್​ಗಳಿಗೆ ಪೆವಿಲಿಯನ್​ ಹಾದಿ ತೋರಿಸಿದರು. ಸುಯೆಶ್ 3ನೇ ಓವರ್​ನ 2ನೇ ಎಸೆತದಲ್ಲಿ ಆರ್​ಸಿಬಿ ಆರಂಭಿಕ ಫಾಫ್ ಡು ಪ್ಲೆಸಿಸ್ 17(7)ವಿಕೆಟ್ ಉರುಳಿಸಿದರು. ಬಳಿಕ, ಸುಯೆಶ್ ಮತ್ತೊಂದು ವಿಕೆಟ್ ಕಬಳಿಸಿದರು. ಶಹಬಾಜ್ ಎಲ್​ಬಿ ಬಲೆಗೆ ಬಿದ್ದರು.

ಪವರ್ ಪ್ಲೇ ಕೊನೆಯ ಓವರ್​ನಲ್ಲಿ ಮ್ಯಾಕ್ಸ್​ವೆಲ್ ಕೂಡ ಔಟಾದರು. ಇನ್ನೂ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ರಸೆಲ್ ಓವರ್​ನಲ್ಲಿ ಅಯ್ಯರ್​ಗೆ ಕ್ಯಾಚಿತ್ತು ಔಟಾದರು. 18 ಎಸೆತದಲ್ಲಿ 34 ರನ್ ಬಾರಿಸಿದ್ದ ಮಹಿಪಾಲ್ ಅವರು ವರುಣ್ ಬೌಲ್ ಮಾಡಿದ 12ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ, ನಂತರದ ಎಸೆತದಲ್ಲೇ ಔಟಾದರು.

RELATED ARTICLES

Related Articles

TRENDING ARTICLES