Monday, December 23, 2024

ಮಹಾಲಕ್ಷ್ಮಿಲೇಔಟ್ ‘ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧ’ : ಸಚಿವ ಕೆ. ಗೋಪಾಲಯ್ಯ

ಬೆಂಗಳೂರು : ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಸದಾ ಸಿದ್ಧ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಭರವಸೆ ನೀಡಿದ್ದಾರೆ.

ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆ ಕಂಠೀರವ ನಗರ ಹಾಗೂ ಪರಿಮಳ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಸಚಿವ ಕೆ. ಗೋಪಾಲಯ್ಯ ಅವರು ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿರುವ ಸಚಿವ ಕೆ.ಗೋಪಾಲಯ್ಯ ಅವರು, ತಮ್ಮೆಲ್ಲರ ಬೇಡಿಕೆಗಳನ್ನು ಅರಿತು ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯಮಗ್ನನಾಗಿದ್ದೇನೆ. ಮುಂದೆಯೂ ನನ್ನ ಕಾರ್ಯಗಳು ಮುಂದುವರಿಯಲಿದೆ ಎಂದು ಮತಯಾಚಿಸಿದರು.

ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ

ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ನಿರ್ಮಾಣ ಹಾಗೂ ಕೋವಿಡ್ ಅವಧಿಯಲ್ಲಿ  350ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟು ಸಚಿವ ಕೆ.ಗೊಪಾಲಯ್ಯ ಜನರ ಬಳಿ ತನ್ನನ್ನು ಈ ಬಾರಿಯೂ ಆಶೀರ್ವದಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ : ಬಿಜೆಪಿ ನಮ್ಮತನದ ಸಂಸ್ಕೃತಿಗೆ ಒತ್ತು ಕೊಟ್ಟಿದೆ : ಅಶ್ವತ್ಥನಾರಾಯಣ

ಉಚಿತ ಶಿಕ್ಷಣ ನೀಡಲು ಕ್ರಮ

ಕ್ಷೇತ್ರದಲ್ಲಿ ಸುಸಜ್ಜಿತ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಸುಮಾರು ಒಂದೂವರೆ ಸಾವಿರ ಮಕ್ಕಳು ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ಶಿಕ್ಷಣವನ್ನು ಕೊಡಲು ಮುಖಂಡರುಗಳು ಕ್ರಮ ವಹಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೆ.ಗೋಪಾಲಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್,  ಮಾನ್ಯಳ್ ನಾಗರಾಜು, ಪ್ರಸನ್ನ ಕುಮಾರ, ಪ್ರಸನ್ನ, ಹನುಮಂತು, ಹನುಮಂತರಾಯಪ್ಪ, ಮರಿಯಣ್ಣ, ಸುರಭಿ ನಾಗರಾಜು, ಅಂಬರೀಶ್, ಪುಟ್ಟಸ್ವಾಮಿ, ನಾರಾಯಣಸ್ವಾಮಿ  ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES