ಬೆಳಗಾವಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬಂದಷ್ಟು ನಮಗೆ ಲಾಭ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಳಕವಾಡಿದ್ದಾರೆ.
ಜಯವಾಹಿನಿ ಯಾತ್ರೆಯ ಅಂಗವಾಗಿ ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಿ, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚಿಸಿದರು.
ಈ ವೇಳೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಯಾಕೆ ಬರುತ್ತಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಆದರೆ, ರಾಹುಲ್, ಪ್ರಿಯಾಂಕಾ ಇಲ್ಲಿ ಬಂದಿದ್ದಾರೆ. ರಾಹುಲ್, ಪ್ರಿಯಾಂಕಾ ಬಂದಷ್ಟು ನಮಗೆ ಅನುಕೂಲ. ಅವರು ಹೋದಲ್ಲಿ ಕಾಂಗ್ರೆಸ್ ಸೋತಿದೆ. ಅವರು ಬಂದಷ್ಟು ನಮಗೆ ಲಾಭವಾಗಲಿದೆ ಎಂದು ಸಿಎಂ ಬೊಮ್ಮಯಿ ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ದರ್ಗಾ, ಮಸೀದಿಗೆ 16 ಕೋಟಿ ಅನುದಾನ ನೀಡಿದ್ದೇನೆ : ಸಿಎಂ ಬೊಮ್ಮಾಯಿ
ಮೋದಿ ಹೆಸರು ಹೇಳಿದ್ರೆ ಕಾಂಗ್ರೆಸ್ಗೆ ಉರಿ
ಅಮಿತ್ ಶಾ ಅವರು, ಪ್ರಧಾನ ನರೇಂದ್ರ ಮೋದಿ ಅವರ ಹೆಸರು ಹೇಳಿದ್ದಕ್ಕೆ ಕಾಂಗ್ರೆಸ್ ನವರಿಗೆ ಉರಿ ಹತ್ತಿದೆ. ಮೋದಿಯವರು ಎಲ್ಲಿ ಹೊಗಿದ್ದಾರೆ. ಅಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಚುನಾವಣೆ ಐತಿಹಾಸಿಕವಾಗಿದೆ. ನಮ್ಮ ನೆಚ್ಚಿನ ಪ್ರಧಾನಿ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ದೇಶದ ಅಭಿವೃದ್ದಿ ಮಾಡುತ್ತಿದ್ದಾರೆ ಎಂದು ಮೋದಿಯನ್ನು ಕೊಂಡಾಡಿದ್ದಾರೆ.
ಅವ್ರು ಕಾಂಗ್ರೆಸ್ಗೆ ಮತ ಹಾಕಲಿ
ಯಾರಿಗೆ ಕರ್ನಾಟಕದ ಅಭಿವೃದ್ಧಿ ಬೇಕಿದೆ ಅವರು ಡಬಲ್ ಎಂಜಿನ್ ಸರ್ಕಾರ ಬೆಂಬಲಿಸುತ್ತಾರೆ. ಡಬಲ್ ಎಂಜಿನ್ ಸರ್ಕಾರ ಬೇಡ ಅನ್ನುವವರು ಕಾಂಗ್ರೆಸ್ ಗೆ ಮತ ಹಾಕಲಿ. ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ರಾಜ್ಯದಲ್ಲಿ 60 ಸಾವಿರ ಕೋಟಿ ರೂ. ವೆಚ್ಚದಲ್ಲಿ 6000 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಕುಡಚಿ ರೈಲ್ವೆ ಲೈನ್ ಡಬಲ್ ಮಾಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಎಲ್ಲವೂ ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.