Monday, December 23, 2024

ಶಿಡ್ಲಘಟ್ಟದಲ್ಲಿ ಮುಂದುವರಿದ ಸೀಕಲ್ ರಾಮಚಂದ್ರಗೌಡರ ಮತ ಬೇಟೆ

ಬೆಂಗಳೂರು : ಶಿಡ್ಲಘಟ್ಟ ಮತಕ್ಷೇತ್ರ ಅಕ್ಷರಶಃ ಕೇಸರಿ ಮಯವಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರಿಗೆ ಕ್ಷೇತ್ರದ ಜನರಿಂದ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಮತ ಬೇಟೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಎದುರಾಳಿ ಪಕ್ಷಗಳು ತಬ್ಬಿಬ್ಬಾಗಿವೆ. ಎಂದಿನಂತೆ ಇಂದು ಸೀಕಲ್ ರಾಮಚಂದ್ರಗೌಡ ಅವರು ತಲಕಾಯಲ ಬೆಟ್ಟ ಮತ್ತು ಈ ತಿಮ್ಮಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.

ಮಾಜಿ ಶಾಸಕ ರಾಜಣ್ಣ ಅವರ ನೇತೃತ್ವದಲ್ಲಿ ತಲಕಾಯಲ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಿ.ನಕ್ಕನಹಳ್ಳಿ, ಆಟ ಗೊಲ್ಲಹಳ್ಳಿ, ಬಂಡಹಳ್ಳಿ, ಗಾಂಡ್ಲಚಿಂತೆ, ದಿಂಬಾರ್ಲಹಳ್ಳಿ, ಮರಳಪ್ಪನಹಳ್ಳಿ, ದಾಸರಹಳ್ಳಿ, ಬುಡಗವಾರಹಳ್ಳಿ, ಮಾದೇನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಬಳಿಕ, ಈ ತಿಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಡ್ಲವಾರಹಳ್ಳಿ, ಎಸ್.ಎಂ ಕೊಂಡರಾಜನಹಳ್ಳಿ, ವರಸಂದ್ರ, ಶೆಟ್ಟಿಕೆರೆ, ತುರುಕಾಚೆನಹಳ್ಳಿ, ಕೊಮ್ಮಸಂದ್ರ, ಹಳೆ ಹಳ್ಳಿ, ಮಲ್ಲಿ ಶೆಟ್ಟಿಪುರ, ಬೈರಗಾನಹಳ್ಳಿ ಸುಬ್ಬರಾಯನ ಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ

ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ

ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ಮತ್ತು ಮಾಜಿ ಶಾಸಕ ಎಂ. ರಾಜಣ್ಣ ಅವರನ್ನು ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು. ಪ್ರಚಾರ ಸಭೆಯಲ್ಲಿ ಚುನಾವಣಾ ಪ್ರಚಾರ ಸಮಿತಿ ಸದಸ್ಯರಾದ ಆಂಧ್ರಪ್ರದೇಶದ ಲಕ್ಷ್ಮಿ ಪ್ರಸನ್ನ, ಲಕ್ಷ್ಮಿ ಸಂತೋಷ್, ಮುಖಂಡರಾದ ಚಿಕನ್ ವಿಜಿ, ಮಾರ್ತಾಂಡ ತೇಜು, ಹಂಡಿಗನಾಳ ಸುರೇಶ್, ಪ್ರಕಾಶ್, ಮೋಹನ್, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಈ ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶ್ರೀನಿವಾಸ, ಜಜ್ಜಪ್ಪ, ನಾಗರಾಜ್, ವೆಂಕಟೇಶ್, ನಾರಾಯಣಪ್ಪ, ನರಸಿಂಹಪ್ಪ, ಪೂಜಪ್ಪ, ವೆಂಕಟರಮಣಪ್ಪ, ಪಿಂಡಿ ವೆಂಕಟೇಶ್, ನಾರಾಯಣ ರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಮುನಿಯಪ್ಪ, ನಲ್ಲ ನಾರಾಯಣಸ್ವಾಮಿ, ವೆಂಕಟರಮಣಪ್ಪ ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES