Monday, December 23, 2024

‘ದೇವೇಗೌಡ್ರು ಆಶೀರ್ವಾದ’ ಮಾಡಿ ಕಳುಹಿಸಿರೋನು ‘ನನ್ನ ಮಗ ಸ್ವರೂಪ್’ : ಭವಾನಿ ರೇವಣ್ಣ

ಹಾಸನ : ದೇವೇಗೌಡ್ರು ಆಶೀವಾರ್ದ ಮಾಡಿ ಕಳಿಹಿಸಿರೋನು ಸ್ವರೂಪ್. ಇಂತಹ ಸ್ವರೂಪ್ ಗೆ ನೀವು ವೋಟ್ ಕೊಡಿ ಎಂದು ಭವಾನಿ‌ ರೇವಣ್ಣ ಅವರು ಸ್ವರೂಪ್ ಪರ ಬ್ಯಾಟ್ ಬೀಸಿದರು.

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ ಅವರ ಪರ ಪ್ರಚಾರ ನಡೆಸಿದ ಅವರು, ನನ್ನ ಮಗ.. ಸ್ವರೂಪ್ ನನ್ನ ಮಗ.. ಸ್ವರೂಪ್ ನ ಗೆಲ್ಲಿಸಿದ್ರೆ ಹಾಸನಕ್ಕೆ ಇನ್ನೂ ಏನೇನ್ ಅಭಿವೃದ್ಧಿ ಆಗಬೇಕು ಅವೆಲ್ಲವನ್ನೂ ಅಭಿವೃದ್ಧಿ ಮಾಡ್ತೇವೆ ಎಂದು ಹೇಳಿದರು.

ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ ಭವಾನಿ‌ ರೇವಣ್ಣ, ಜೆಡಿಎಸ್ ಗೆ ವೋಟ್ ಹಾಕಬೇಕು ಅಂದಾಗ ಒಂದು ಉತ್ತರ ಸಿಗುತ್ತದೆ. ಇಲ್ಲಿ ಅಭಿವೃದ್ಧಿ ಅಂತಾ ಹಾಗಿದ್ರೆ ಅದು ಜೆಡಿಎಸ್ ನವರ ಕಾಲದಲ್ಲಿ ಅಂತಾ ಉತ್ತರ ಸಿಗುತ್ತೆ. ಸ್ವರೂಪ್ ಅಂತಾ ಬಂದಾಗ ದುರಹಂಕಾರಿ ಶಾಸಕನನ್ನು ಆಚೆ ಹಾಕೋದಕ್ಕೆ ಸ್ವರೂಪ್ ಗೆ ವೋಟ್ ಹಾಕಬೇಕು ಅಂತಾ ಉತ್ತರ ಬರುತ್ತೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಸ್ವರೂಪ್ ಬೇರೆ ಅಲ್ಲ ನನ್ನ ಮಕ್ಕಳು ಬೇರೆ ಅಲ್ಲ : ಭವಾನಿ ರೇವಣ್ಣ

ನಾವ್ ಹಾಸನ ಬಿಟ್ಟು ಹೋಗಿ ಅಂದ್ವಾ?

ನಾವ್ ಹೇಳಿದ್ದೀವಾ..‌ಊರ್ ಬಿಟ್ಟು ಓಡಿಸ್ತಿನಿ ಅಂತಾ ನಾವೇನಾದ್ರೂ ಹೇಳಿದಿವಾ? ಅವರಾಗೆ ಅವರು ಹೇಳಿಕೊಂಡಿದ್ದಾರೆ. ನೀವರೆನಾದ್ರೂ ಹೇಳಿದಿರಾ. ನಾವ್ ಎಂದೂ ಹೇಳಿಲ್ಲ, ಊರು ಬಿಟ್ಟು ಹೋಗಿ, ಹಾಸನ ಬಿಟ್ಟು ಹೋಗಿ ಅಂತಾ. ಯಾರ್ ಯಾರಿಗೂ ಹೇಳಿಲ್ಲ, ನಾವ್ ಆ ಮಾತನ್ನು ಹೇಳೋದೂ ಇಲ್ಲ. ಆದ್ರೆ ಅವರೇ ಒಪ್ಕೊಂಡಿದ್ದಾರೆ, ನನ್ನ ಹಾಸನ ಬಿಟ್ಟು ಓಡಿಸ್ತಾರೆ ಅಂತಾ ಎಂದು ಭವಾನಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಸೋತ ಮೇಲೆ ಹೋಗ್ತಾರೋ ಏನೋ..!

ಯಾಕ್ ಹೇಳ್ಕೋತಾರೋ ಏನೋ.. ಸೋತ ಮೇಲೆ ಹೋಗ್ತಾರೋ ಏನೋ..ನನಗೆ ಗೊತ್ತಿಲ್ಲ. ಹಿಂದೆ ಹೋದ್ರೆ ಆಲೂರು, ಮುಂದೆ ಹೋದ್ರೆ ಬೆಂಗಳೂರು. ಎರಡೂ ಕಡೆ ಅವರಿಗೆ ಅವಕಾಶ ಇದೆ. ಹಿಂದಕ್ಕಾದ್ರೂ ಹೋಗಿ, ಮುಂದಕ್ಕಾದ್ರೂ ಹೋಗಿ. ಅದರ ಬಗ್ಗೆ ನಾವು ಚಿಂತನೆ ಮಾಡೋದು ಬೇಡ ಎಂದು ಹೇಳಿದ್ದಾರೆ.

ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ನಾವು ಇನ್ನೊಬ್ಬ ವ್ಯಕ್ತಿನ ದೂಡಿ, ಇನ್ನೊಬ್ಬ ವ್ಯಕ್ತಿನ ಅವಹೇಳನ ಮಾಡಿ, ಇನ್ನೊಬ್ಬರಿಗೆ ಏನೋ ಮಾಡಿ ಮತ ಕೊಡಿ ಅಂತಾ ಕೇಳೋದಿಲ್ಲ. ಇನ್ನೊಬ್ಬ ವ್ಯಕ್ತಿನ ಎತ್ತರ ಮಟ್ಟಕ್ಕೆ ಬಿಂಬಿಸಿ ಮತ ಕೊಡಿ ಅಂತಾ ಕೇಳೋದಿಲ್ಲ ಎಂದು ಭವಾನಿ ರೇವಣ್ಣ ಅಬ್ಬರದ ಭಾಷಣ ಮಾಡಿದ್ದಾರೆ.

RELATED ARTICLES

Related Articles

TRENDING ARTICLES