Wednesday, January 22, 2025

ಯೋಗಿ ಆದಿತ್ಯನಾಥ್ ‘ಭಾರತದ ಮುಂದಿನ ಪ್ರಧಾನಿ’ : ಅಶೋಕ್ ಜಯರಾಮ್ ಬಣ್ಣನೆ

ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾರತದ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅಭಿಪ್ರಾಯಪಟ್ಟಿದ್ದಾರೆ.

ನಾಳೆ (ಏಪ್ರಿಲ್‌ 26) ಸಿಎಂ ಯೋಗಿ ಆದಿತ್ಯನಾಥ್‌ ಮಂಡ್ಯದಲ್ಲಿ ಬೃಹತ್‌ ರೋಡ್‌ ನಡೆಸುವ ಬಗ್ಗೆ ಮಾತನಾಡಿರುವ ಅವರು, ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ. ನಾನು ಹೆಮ್ಮೆಯಿಂದ ಹೇಳುತ್ತೇನೆ. ಯೋಗಿ ಆದಿತ್ಯನಾಥ್‌ ಅವರು ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ. ಅಂದರೆ ಒಂದಲ್ಲಾ ಒಂದು ದಿನ ಅಥವಾ ಭವಿಷ್ಯದಲ್ಲಿ ಭಾರತದ ಪ್ರಧಾನಿ ಆಗಬಲ್ಲ ಎಲ್ಲಾ ಗುಣಗಳು (ನಾಯಕತ್ವ ಗುಣ) ಅವರಲ್ಲಿದೆ ಎಂದು ಅಶೋಕ್ ಜಯರಾಮ್ ತಿಳಿಸಿದ್ದಾರೆ.

ಎರಡು ದಿನ ರಾಜ್ಯ ಪ್ರವಾಸ

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಗೆ ಬಂದು ರೋಡ್ ಶೋ ಮಾಡಿ ಹೋದರು. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಏಪ್ರಿಲ್ 25 ಮತ್ತು 26ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಂಡ್ಯದಲ್ಲಿ ಬೃಹತ್‌ ರೋಡ್‌ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಅಶೋಕ್ ಜಯರಾಮ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಬೇಡ : ಸುಮಲತಾ ಅಂಬರೀಶ್

ಯೋಗಿ ಆಗಮನದಿಂದ ಚೈತನ್ಯ

ಮಂಡ್ಯ ನಗರದಲ್ಲಿ ರೋಡ್ ಶೋ ನಡೆಸಿದ ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಆಗಮನದಿಂದ ಕಾರ್ಯಕರ್ತರಲ್ಲಿ ಚೈತನ್ಯ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಗಂಗಾಧರೇಶ್ವರನಿಗೆ ಅಶೋಕ್ ಪೂಜೆ

ಮಂಡ್ಯ ನಗರದ 4ನೇ ವಾರ್ಡಿನ ಶಂಕರಪುರದ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅಶೋಕ್ ಜಯರಾಮ್ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿ, ಆದಿಚುಂಚನಗಿರಿಯ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ, ಮಂಡ್ಯ ನಗರದ ಸಿಹಿನೀರುಕೊಳದ  ಮಾರುತಿ ಸಾಮಿಲ್ ಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

RELATED ARTICLES

Related Articles

TRENDING ARTICLES