Wednesday, September 17, 2025
HomeUncategorizedಮೆಗಾಸ್ಟಾರ್ ಚಿರಂಜೀವಿ ಸೊಸೆಯ ಅದ್ಧೂರಿ ಸೀಮಂತ ಸಂಭ್ರಮ ; ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಭಾಗಿ

ಮೆಗಾಸ್ಟಾರ್ ಚಿರಂಜೀವಿ ಸೊಸೆಯ ಅದ್ಧೂರಿ ಸೀಮಂತ ಸಂಭ್ರಮ ; ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಭಾಗಿ

Ram Charan and Upasana baby shower : ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲೀಗ ಸಂತಸ ಮನೆ ಮಾಡಿದೆ. 3 ವಾರದ ಹಿಂದಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಉಪಾಸನಾ ಶ್ರೀಮಂತ ಸಂಭ್ರಮ ನೆಡಿದಿತ್ತು,ಅಂದ್ರೆ ಅದರ ಬೆನ್ನಲ್ಲೇ ಹೈದ್ರಾಬಾದ್ ರಾಮ್ ಚರಣ್ ನಿವಾಸದಲ್ಲಿ ಮತ್ತೊಮ್ಮೆ ಸೀಮಂತ ಕಾರ್ಯಕ್ರಮ ನಡೆದಿದೆ.

ಹೌದು,ಮದುವೆಯಾಗಿ ಬರೋಬ್ಬರಿ 10 ವರ್ಷದ ಬಳಿಕ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೆಲಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಜೊತೆಗೆ ಆಸ್ಕರ್ ಗೆದ್ದಿರುವ ಸಡಗರ ಕೂಡ ರಾಮ್ ಮುಖದಲ್ಲಿದೆ.

ಇನ್ನೂ ಸದಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಮೆಗಾಸ್ಟಾರ್ ಪುತ್ರ ಪತ್ನಿಯನ್ನು ಬಹಳ ಪ್ರೀತಿಯಿಂದ ಹಾರೈಕೆ ಮಾಡುತ್ತಿದ್ದಾರೆ.

ಹೈದ್ರಾಬಾದ್ ನಲ್ಲಿ ನಡೆದ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ರಾಮ್ ಉಪಾಸನಾ ಸುಂದರವಾಗಿ ಕಂಗೊಳಿಸಿದ್ದಾರೆ. ಈ ಪಾರ್ಟಿಯಲ್ಲಿ ಪಿಂಕಿ ರೆಡ್ಡಿ, ಸಾನಿಯಾ ಮಿರ್ಜಾ, ಕನಿಕಾ ಕಪೂರ್, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಸದಸ್ಯರು, ಚಿರಂಜೀವಿ ಮತ್ತು ಸುರೇಖಾ ಕೊನಿಡೇಲ, ಸಹೋದರಿಯರಾದ ಸುಶ್ಮಿತಾ ಮತ್ತು ಶ್ರೀಜಾ, ಉಪಾಸನಾ ಅವರ ತಾಯಿ, ಶ್ರೀಮತಿ ಶೋಬನಾ ಕಾಮಿನೇನಿ, ಸಂಗೀತಾ ರೆಡ್ಡಿ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments