Wednesday, January 22, 2025

ಧೀರಜ್ ಮುನಿರಾಜು ಪರ ಅಣ್ಣಾಮಲೈ ಮತ ಬೇಟೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ರಾಜ್ಯ ಚುನಾವಣಾ ಉಸ್ತುವಾರಿ ಕೆ. ಅಣ್ಣಾಮಲೈ ಕಾರ್ಯಕರ್ತರ ಸಭೆ ನಡೆಸಿ, ಮತ ಪ್ರಚಾರ ನಡೆಸಿದರು.

ದೊಡ್ಡಬಳ್ಳಾಪುರ ನಗರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವುದರ ಮೂಲಕ ಮತ ಬೇಟೆ ನಡೆಸಿದರು. ಕಾರ್ಯಕ್ರಮದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಂವಾದದಲ್ಲಿ ಬೂತ್ ಮಟ್ಟದಲ್ಲಿ ಯಾವ ರೀತಿ ಮತಯಾಚನೆ ಮಾಡಬೇಕು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಜೊತೆಗೆ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಧೀರಜ್ ಮುನಿರಾಜು ಅವರ ಗೆಲುವಿಗೆ ಚುನಾವಣಾ ದಿನಾಂಕದ ವರೆಗೂ ಕಾರ್ಯಕರ್ತರು ದುಡಿಯಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ಧೀರಜ್ ಮುನಿರಾಜು ಶಕ್ತಿ ಪ್ರದರ್ಶನ : ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ

ಹಳ್ಳಿಗಳಲ್ಲಿ ಭರ್ಜರಿ ಮತ ಶಿಕಾರಿ

ಧೀರಜ್ ಮುನಿರಾಜು ಅವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಕ್ಕರೆಗೊಳ್ಳಹಳ್ಳಿ ಪಂಚಾಯಿತಿ ಹಾಗೂ ಸುತ್ತ ಮುತ್ತಲಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಭರ್ಜರಿ ಪ್ರಚಾರ ನಡೆಸಿದರು. ಬಿಜೆಪಿ ಪಕ್ಷಕ್ಕೆ ಬೆಂಬಲವನ್ನು ಆಶಿಸಿ ಮತ ಬೇಟೆ ಕಾರ್ಯವನ್ನು ನಡೆಸಿದರು. ತಾವೆಲ್ಲಾರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಹಬ್ಬದಲ್ಲಿ ಭಾಗವಹಿಸಿ ಬಿಜೆಪಿ ಪಕ್ಷದ ಗೆಲುವಿಗೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಧೀರಜ್​ಗೆ ಯುವಕರ ಬಲ

ದೊಡ್ಡಬಳ್ಳಾಪುರದ ವಾರ್ಡ್ ನಂಬರ್ 25ರಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ, ಅನೇಕ ಯುವಕರು, ಮುಖಂಡರುಗಳು ಸ್ವಇಚ್ಛೆಯಿಂದ ಪಕ್ಷವನ್ನು ಸೇರ್ಪಡೆಗೊಂಡರು. ಈ ವೇಳೆ ಧೀರಜ್ ಮುನಿರಾಜು ಅವರು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ, ನಿಮ್ಮ ಅಭಿಮಾನ, ಪ್ರೀತಿ ಹಾಗೂ ಸಹಕಾರಕ್ಕೆ ನಾನು ಸದಾ ಚಿರಋಣಿ ಎಂದರು.

RELATED ARTICLES

Related Articles

TRENDING ARTICLES