ಬೆಂಗಳೂರು : ಕುಮಾರಣ್ಣ ಸಿಎಂ ಆದ 24 ಗಂಟೆಯೊಳಗೆ ಸಂಪೂರ್ಣ ಸಾಲಮನ್ನಾ ಆಗಲಿದೆ ಎಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಭರವಸೆ ನೀಡಿದ್ದಾರೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆವನಿ ಹೋಬಳಿ ಊ.ಮಿಟ್ಟೂರು ಪಂಚಾಯಿತಿಯ ಮಿಣಜೇನಹಳ್ಳಿಯಲ್ಲಿ ಇಂದು ಸಮೃದ್ಧಿ ಮಂಜುನಾಥ್ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದ್ದಾರೆ.
ಈ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮುಳಬಾಗಿಲು ಕ್ಷೇತ್ರ ಸ್ವಾಭಿಮಾನ ಕ್ಷೇತ್ರವಾಗಿದೆ. ಕಾಂಗ್ರೆಸ್ ನವರು ಹಣ ಕೊಟ್ಟು ಮತ ಕೇಳ್ತಿದ್ದಾರೆ. ಆದರೆ, ನಾವು ಸಾಲಮನ್ನಾ, ಪಿಂಚಣಿ ಯೋಜನೆ, ಗುಡಿಸಲು ಮುಕ್ತ ಯೋಜನೆ, ಪಂಚಾಯತಿಗೊಂದು ಸ್ಕೂಲ್ ಹೀಗೆ ಹಲವು ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಮತ ನೀಡಿದ್ರೆ ‘ಅಮೂಲ್’ಗೆ ಮತ ನೀಡಿದಂತೆ : ಜೆಡಿಎಸ್ ಲೇವಡಿ
ಸಮೃದ್ಧಿ ಮಂಜುನಾಥ್ ಕ್ಷಮೆ ಕೇಳಿದ್ದೇಕೆ?
ಬೆಳಗಿನ ಉಪಹಾರಕ್ಕೆ ಬರಬೇಕಾಗಿದ್ದ ನಾನು ತಡವಾಗಿ ಬಂದಿದ್ದೇನೆ. ಅದಕ್ಕಾಗಿ ತಮಗೆಲ್ಲರಿಗೂ ಕ್ಷಮೆ ಕೇಳುತ್ತೇನೆ. ಕುಮಾರಣ್ಣ ಬಂದ 24 ಗಂಟೆಯೊಳಗೆ ಸಂಪೂರ್ಣ ಸಾಲ ಮನ್ನಾ ಆಗಲಿದೆ. ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ಮತ ಕೇಳುವ ಬದಲು ಮನೆ ಮನೆಗೆ ತೆರಳಿ ಮತ ಕೇಳಬೇಕು ಅಂತಾ ನಿಮ್ಮಲಿಗೆ ಬಂದಿದ್ದೇನೆ ಎಂದು ಸಮೃದ್ಧಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ನನ್ನ ಸೋಲಿಸಲು ಪಿತೂರಿ ಮಾಡ್ತಿದ್ದಾರೆ
ಕಾಂಗ್ರೆಸ್ ನವರು ನನ್ನ ಸೋಲಿಸಲು ಪ್ರತಿ ಬಾರಿ ಪಿತೂರಿ ಮಾಡುತ್ತಿದ್ದರು. ಆದರೆ, ಈ ಬಾರಿ ನಾನು ಇಲ್ಲೇ ಇದ್ದು ಇಡೀ ತಾಲ್ಲೂಕಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗಾಗಿ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ಗೆ ಮತ ನೀಡಬೇಕು. ನಿಮ್ಮ ಆಶೀರ್ವಾದ ನಿಮ್ಮ ಮನೆ ಮಗನ ಮೇಲೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ, ಆವನಿ ಹೋಬಳಿ ಊ.ಮಿಟ್ಟೂರು ಪಂಚಾಯಿತಿಯ ಚಿಯಾಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಮೃದ್ಧಿ ಮಂಜುನಾಥ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಯೊಂದು ಹಳ್ಳಿಯಲ್ಲೂ ಅಭೂತಪೂರ್ವ ಬೆಂಬಲ ನೀಡಿದ್ದಾರೆ.