Monday, January 20, 2025

ನವಲಿ ಹಿರೇಮಠ್​ಗೆ ಭಾರೀ ಬೆಂ’ಬಲ’ : 300ಕ್ಕೂ ಹೆಚ್ಚು ‘ಮುಸ್ಲಿಂ ಮುಖಂಡರು’ ಕೆಆರ್​ಪಿ ಸೇರ್ಪಡೆ

ಬಾಗಲಕೋಟೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೇವಲ 15 ದಿನ ಬಾಕಿಯಿದ್ದು, ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲುವಿನ ತಂತ್ರಕ್ಕೆ ಮುಂದಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ನವಲಿ ಹಿರೆಮಠ್ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಹೌದು, ಹುನಗುಂದ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಎಸ್.ಆರ್ ನವಲಿ ಹಿರೇಮಠ್ ಅವರ ಸಮಾಜಮುಖಿ ಕಾರ್ಯಕ್ಕೆ ಮನಸೋತು ಕೆಆರ್​ಪಿ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ.

ಇಲಕಲ್ ನಗರದ ಕೆಆರ್​ಪಿ ಪಕ್ಷದ ಕಚೇರಿಯಲ್ಲಿ ಎಸ್.ಆರ್ ನವಲಿ ಹಿರೇಮಠ್ ಅವರ ಸಮ್ಮುಖದಲ್ಲಿ ಹನಗುಂದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಾದ ರಿಯಾಜ್ ಮುಲ್ಲಾ ಅವರು ತಮ್ಮ 300ಕ್ಕೂ ಹೆಚ್ಚು ಬೆಂಬಲಿಗರ ಸಮೇತ ಇಂದು ಕೆಆರ್​ಪಿ ಪಕ್ಷ ಸೇರ್ಪಡೆಯಾದರು.

ಇದನ್ನೂ ಓದಿ : ರಘು ಆಚಾರ್​ಗೆ ಮತ್ತಷ್ಟು ಬಲ : ‘ಕೈ’ ಬಿಟ್ಟು ‘ದಳ’ ಹಿಡಿದ ಮುಸ್ಲಿಂ ಮುಖಂಡರು

ಪಕ್ಷಕ್ಕೆ ಸೇರ್ಪಡೆಯಾದ ರಿಯಾಜ್ ಮುಲ್ಲಾ, ಮೈಬೂಬ್ ಹಣಗಿ, ಖಾಸಿಂ ಚಾವಣಿ, ನಜೀರ್ ಹಕಾರಿ, ಶೌಖತ್ ಸೇರಿದಂತೆ 300ಕ್ಕೂ ಹೆಚ್ಚ ಜನರನ್ನು ಎಸ್.ಆರ್ ನವಲಿ ಹಿರೇಮಠ್ ಪಕ್ಷದ ಶಾಲು ಹಾಗೂ ಹಾರವನ್ನು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಆರ್​ಪಿ ಪಕ್ಷದ ಮುಖಂಡರಾದ ಮುಕ್ತಾರ್, ಬಸವರಾಜ್ ತಾಳಿಕೋಟೆ, ಯುಸೂಪ್, ರಂಜಾನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮನೆ-ಮನೆ ಪ್ರಚಾರ

ಇನ್ನೂ ಹುನಗುಂದ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹವಾ ಜೋರಾಗಿದೆ. ಎಸ್.ಆರ್ ನವಲಿ ಹಿರೇಮಠ್ ಅವರು ಇಲಕಲ್ ನಗರದಲ್ಲಿ ಮತ ಶಿಕಾರಿ ಆರಂಭ ಮಾಡಿದ್ದಾರೆ. ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES