ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಕಣ ಕಾವೇರುತ್ತಿದ್ದು, ಬಿಜೆಪಿ ಪರ ಪ್ರಚಾರಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ನಾಳೆ ಸಕ್ಕರೆ ನಾಡು ಮಂಡ್ಯದಲ್ಲಿ ರೋಡ್ ಶೋ, ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯ ಭೇಟಿ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮಂಡ್ಯಕ್ಕೆ ಆಮಿಸುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ, ಮಂಡ್ಯಕ್ಕೆ ಆಗಮಿಸುವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕರುನಾಡಲ್ಲಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ : ನಿಮ್ಮ ಊರಿಗೆ ಬರಲಿದ್ದಾರೆ ನಮೋ?
ಹೀಗಿರಲಿದೆ ಯೋಗಿ ಹವಾ
- ನಾಳೆ ಬೆಳಗ್ಗೆ 8 ಗಂಟೆಗೆ ಲಕ್ನೊನಿಂದ ಹೊರಡಲಿರುವ ಯೋಗಿ ಆದಿತ್ಯನಾಥ್
- ಲಕ್ನೋನಿಂದ ವಿಶೇಷ ವಿಮಾನ ಮೂಲಕ 10.30ಕ್ಕೆ ಮೈಸೂರಿಗೆ ಆಗಮನ
- ಮೈಸೂರಿನಿಂದ ಚಾಪರ್ ಮೂಲಕ 10.50ಕ್ಕೆ ಮಂಡ್ಯದ ಪಿಇಎಸ್ ಕಾಲೇಜ್ಗೆ ಲ್ಯಾಂಡಿಂಗ್
- ಹೆಲಿಪ್ಯಾಡ್ನಿಂದ 11 ಗಂಟೆಗೆ ಸಂಜಯ ಸರ್ಕಲ್ಗೆ ಆಗಮನ
- ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಶೋಕ್ ಜಯರಾಮ್, ಉಸ್ತುವಾರಿ ಇ.ಸಿ. ನಿಂಗರಾಜು, ಜಿಲ್ಲಾಧಕ್ಷ ಸಿ.ಪಿ. ಉಮೇಶ್ ನೇತೃತ್ವದಲ್ಲಿ ರೋಡ್ ಶೋ
- ರೋಡ್ ಶೋ ಮೂಲಕ ಸಿಲ್ವರ್ ಜ್ಯುಬಿಲಿ ಪಾರ್ಕ್ಗೆ ಆಗಮನ
- ಸಭೆಯಲ್ಲಿ ಏಳೂ ಕ್ಷೇತ್ರದ ಅಭ್ಯರ್ಥಿಗಳು ಹಾಜರು
- ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಯೋಗಿ ಆದಿತ್ಯನಾಥ್ ಭಾಷಣ
- 12.05ಕ್ಕೆ ಸಭೆಯಿಂದ ನಿರ್ಗಮಿಸಲಿರುವ ಯೋಗಿ ಆದಿತ್ಯನಾಥ್
- 12.10ಕ್ಕೆ ಮಂಡ್ಯದ ಪಿಇಎಸ್ ಹೆಲಿಪ್ಯಾಡ್ ಗೆ ಆಗಮನ
- 12.15ಕ್ಕೆ ಮಂಡ್ಯದಿಂದ ಟೇಕಾಫ್ ಆಗಲಿರುವ ಚಾಪರ್
- 12.30ಕ್ಕೆ ಮೈಸೂರು ಏರ್ಪೋಟ್ ತಲುಪಲಿರೊ ಆದಿತ್ಯನಾಥ್
- 12.40ಕ್ಕೆ ಮೈಸೂರಿನಿಂದ 1.30ಕ್ಕೆ ಹುಬ್ಬಳ್ಳಿ ಏರ್ಪೋರ್ಟ್ ಗೆ ಆಗಮನ