Sunday, December 22, 2024

ಬಿಜೆಪಿ ನಮ್ಮತನದ ಸಂಸ್ಕೃತಿಗೆ ಒತ್ತು ಕೊಟ್ಟಿದೆ : ಅಶ್ವತ್ಥನಾರಾಯಣ

ಬೆಂಗಳೂರು : ಬಿಜೆಪಿ ಸರ್ಕಾರ ನಮ್ಮತನದ ಸಂಸ್ಕೃತಿಗೆ ಒತ್ತು ಕೊಟ್ಟಿದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಪ್ಯಾಲೇಸ್‌ ಗುಟ್ಟಹಳ್ಳಿ ಮತ್ತು 11ನೇ ಅಡ್ಡರಸ್ತೆಯಲ್ಲಿ ನಡೆದ ರಾಮಾನುಜ ಜಯಂತಿ ಮತ್ತು ಶಂಕರ ಜಯಂತಿ ಕಾರ್ಯಕ್ರಮಗಳಲ್ಲಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು, ದೇಶದ ಸಂಸ್ಕೃತಿ, ಧರ್ಮ ಸಂರಕ್ಷಣೆ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಮಹಾಪುರುಷರ ಹೆಜ್ಜೆಗುರುತು

ಬಿಜೆಪಿ ಸರ್ಕಾರ ಕೂಡ ನಮ್ಮತನದ ಸಂಸ್ಕೃತಿಗೆ ಒತ್ತು ಕೊಟ್ಟು, ಅಭಿವೃದ್ಧಿಕೇಂದ್ರಿತ ರಾಜಕಾರಣವನ್ನು ಇದರೊಂದಿಗೆ ಸಮ್ಮಿಳಿತಗೊಳಿಸಿದೆ. ಆಚಾರ್ಯರ ತತ್ತ್ವಗಳು ಮತ್ತು ಮೌಲ್ಯಗಳು ಕರ್ನಾಟಕ ಹಾಗೂ ಭಾರತವನ್ನು ಮುನ್ನಡೆಸುತ್ತಿದೆ. ಇಬ್ಬರೂ ಮಹಾಪುರುಷರ ಹೆಜ್ಜೆಗುರುತುಗಳು ಕರ್ನಾಟಕದಲ್ಲಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮಲ್ಲೇಶ್ವರದ ಜನತೆ ‘ಎಂದೆಂದೂ ಬಿಜೆಪಿ’ಯನ್ನೇ ಬೆಂಬಲಿಸುತ್ತಾರೆ : ಅಶ್ವತ್ಥನಾರಾಯಣ

ಇದೇ ವೇಳೆ ಎರಡೂ ಕಡೆಗಳಲ್ಲಿ ಋತ್ವಿಜರ ಮತ್ತು ವಿಪ್ರ ಬಂಧುಗಳ ವೇದಘೋಷಗಳನ್ನು ಕೆಲ ಸಮಯ ಆಲಿಸಿದ ಅವರು, ಬಳಿಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಮಾಲಾರ್ಪಣೆಯ ಗೌರವ ಸಲ್ಲಿಸಿ ನಮಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ರಾಮಾನುಜ ನಾರಾಯಣ ಜೀಯರ್ ಅವರು ಸಚಿವರಿಗೆ ಪುಷ್ಪಮಾಲೆ ಹಾಕಿ, ಫಲ-ತಾಂಬೂಗಳನ್ನು ನೀಡಿ, ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ವಿ.ಡಿ. ಶರ್ಮಾ, ಎರಡೂ ಕಡೆಗಳಲ್ಲಿ ನೂರಾರು ವಿಪ್ರ ಬಂಧುಗಳು ಉಪಸ್ಥಿತರಿದ್ದರು. ಅಶ್ವತ್ಥನಾರಾಯಣ ಅವರು ಅವರೆಲ್ಲರೊಂದಿಗೂ ವಿಚಾರ ವಿನಿಮಯ ನಡೆಸಿದರು.

RELATED ARTICLES

Related Articles

TRENDING ARTICLES