Wednesday, January 22, 2025

ಕುಮಾರಸ್ವಾಮಿ ‘ಈ.. ಹೇಳಿಕೆ ತುಂಬಾ ಹೇಸಿಗೆ’ ಅನಿಸುತ್ತೆ : ಸುಮಲತಾ ಕಿಡಿ

ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅಂಬರೀಶ್ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರವಾಗಿ ಹೇಳಿಕೆ ನೀಡಿರುವ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಅವರ ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತದೆ ಎಂದು ಕುಟುಕಿದ್ದಾರೆ.

ಅಂಬರೀಶ್ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರುವುದು. ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳೋದು ಅವರಿಗೆ ಶೋಭೆ ತರಲ್ಲ ಎಂದು ಕುಮಾರಣ್ಣ ವಿರುದ್ಧ ಸುಮಲತಾ ಗುಡುಗಿದ್ದಾರೆ.

ದ್ವೇಷ ಮಾಡಿದ್ದು ನಾನಾ? ಅವರಾ?

ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೇನೆ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ದ್ವೇಷ ಮಾಡಿದ್ದು ನಾನಾ? ಅವರಾ? ಈ ಬಗ್ಗೆ ಜನ ನೋಡಿಕೊಂಡು ಬಂದಿದ್ದಾರೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇದ್ನೂ ಓದಿ : ‘ದಳ’ಪತಿ ಭದ್ರಕೋಟೆ ‘ಛಿದ್ರ’ ಮಾಡುವುದೇ ಗುರಿ : ಸುಮಲತಾ 

ರೆಕಾರ್ಡ್ ತೆಗೆದು ನೋಡಿ, ಮಾತನಾಡಲಿ

ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನು ಗೆದ್ದಿದೆ. ಹಿಂದಿನ ಇತಿಹಾಸ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ ಎಂದು ಕುಟುಕಿದ್ದಾರೆ.

ಅಂಬರೀಶ್ ಅವರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನು ಜೆಡಿಎಸ್ ನಾಯಕರು ಒಪ್ಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅವರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲಾ. ಅವರ ಮನಸ್ಸನ್ನು ಅವರೇ ಕೇಳಿಕೊಳ್ಳಲಿ. ಒಪ್ಪಿಕೊಳ್ಳದೇ ಇರುವವರು ಅಂಬರೀಶ್ ಅವರನ್ನು ಸಂಪರ್ಕಿಸಲು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ ಗೊತ್ತಿದೆ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES