Monday, December 23, 2024

ಅಶೋಕ್ ಜಯರಾಮ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಬೇಡ : ಸುಮಲತಾ ಅಂಬರೀಶ್

ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಅಶೋಕ್ ಜಯರಾಮ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮಾಜಿ ಸಚಿವ ದಿವಂಗತ ಎಸ್.ಡಿ. ಜಯರಾಮ್ ಅವರ ಪುತ್ರ ಅಶೋಕ್ ಜಯರಾಮ್ ಅವರು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಂಡ್ಯ ಮತದಾರರು ಪ್ರಬುದ್ಧರು. ಈ ಹಿಂದಿನ ರಾಜಕಾರಣಿಗಳನ್ನು ನೋಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಜನ ಬೇಸತ್ತಿದ್ದಾರೆ. ಮಹಿಳೆಯರಾದಿಯಾಗಿ ಎಲ್ಲರೂ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಜನರು ಬಿಜೆಪಿಕೈಹಿಡಿತಾರೆ

ನೆಲೆಯೇ ಇಲ್ಲದಿದ್ದ ಮಂಡ್ಯದಲ್ಲಿ ಬಿಜೆಪಿ ಬಾವುಟ ಎಲ್ಲೆಡೆ ಕಾಣತೊಡಗಿದೆ. ಅಷ್ಟೇ ಅಲ್ಲ, ಬಿಜೆಪಿ ಪರ ಅಲೆ ಎದ್ದಿದ್ದು ಈ ಬಾರಿ ಬಿಜೆಪಿಯನ್ನು ಜನರು ಕೈ ಬಿಡುವುದಿಲ್ಲ. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಶೋಕ್ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅಶೋಕ್ ಜಯರಾಮ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ‘ಕೈ’ ನಾಯಕರು

ಅಶೋಕ್ ಜಯರಾಮ್ ಪರ ಘೋಷಣೆ

ಸಮಾವೇಶದಲ್ಲಿ ಮಹಿಳೆಯರು ಉತ್ಸಾಹದಿಂದಲೇ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಾವಿರಾರು ಮಹಿಳೆಯರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ ಹಾಗೂ ಅಶೋಕ್ ಜಯರಾಮ್ ಪರ ಘೋಷಣೆಗಳನ್ನು ಕೂಗಿದರು.

ಒಟ್ಟಾರೆ, ಮಂಡ್ಯದಲ್ಲಿ ಗೆಲುವಿಗಾಗಿ ಬಿಜೆಪಿ ಈಗಾಗಲೇ ರಣತಂತ್ರ ರೂಪಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿರುವ ಅಸಮಾಧಾನದ ಹೊಗೆಯನ್ನೇ ಬಂಡವಾಳವಾಗಿಟ್ಟುಕೊಂಡು ಸಂಘಟನೆಯನ್ನು ಚುರುಕುಗೊಳಿಸಿದೆ. ಎರಡೂ ಪಕ್ಷಗಳಿಂದ ಬಿಜೆಪಿ ಹಲವಾರು ಮಂದಿ ಸೇರ್ಪಡೆಯಾಗುತ್ತಿರುವುದು ಬಿಜೆಪಿಗೆ ಬಲ ಬಂದಂತಾಗಿದೆ.

RELATED ARTICLES

Related Articles

TRENDING ARTICLES