Sunday, January 19, 2025

ಮುಳಬಾಗಿಲು ಜನತೆ ಎಂದಿಗೂ ನನ್ನನ್ನು ‘ಕೈ’ ಬಿಡಲ್ಲ : ಸಮೃದ್ಧಿ ಮಂಜುನಾಥ್ ವಿಶ್ವಾಸ

ಬೆಂಗಳೂರು : ಮುಳಬಾಗಿಲು ಕ್ಷೇತ್ರದ ಜನತೆ ಎಂದಿಗೂ ನನ್ನ ಹಾಗೂ ಜೆಡಿಎಸ್ ಪಕ್ಷವನ್ನು ಕೈ ಬಿಡುವುದಿಲ್ಲ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇಂದು ಭರ್ಜರಿ ಮತ ಭೇಟೆ ನಡೆಸಿದ ಸಮೃದ್ಧಿ ಮಂಜುನಾಥ್ ಅವರು, ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಮಹಾತ್ವಕಾಂಕ್ಷೆಯ ಪಂಚರತ್ನ ಯೋಜನೆಯ ಅನುಕೂಲಗಳ ಬಗ್ಗೆ ಜನತೆಗೆ ವಿವರಿಸಿದರು.

ಚುನಾವಣೆಯಲ್ಲಿಕೈಗೆ ತಕ್ಕ ಉತ್ತರ

ಈ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ನಾನು ಇಲ್ಲೇ ಉಳಿದುಕೊಂಡಿದ್ದೀನಿ. ಇಲ್ಲೇ ಮನೆ ಕಟ್ಟಿಕೊಂಡು ವಾಸವಾಗಿದ್ದೀನಿ. ಅದಕ್ಕೆ ಕ್ಷೇತ್ರದ ಜನತೆ ನನಗೆ ಪ್ರೀತಿ ಕೊಟ್ಟು, ಸಹಕಾರ ಕೊಟ್ಟು ಗೆಲ್ಲಿಸುತ್ತಾರೆ. ನನ್ನ ಮತಬಾಂಧವರು ಅತಿ ಹೆಚ್ಚು ಮತಗಳನ್ನು ಕೊಟ್ಟು ಜಯಶಾಲಿಯನ್ನಾಗಿಸುತ್ತಾರೆ. ಆ ಮೂಲಕ ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ತಾಯಿ ಪ್ರೀತಿ’ ನೆನೆದು ಸಮೃದ್ಧಿ ಮಂಜುನಾಥ್ ಭಾವುಕ

ಹೋದಲೆಲ್ಲಾ ಜನ ಬೆಂಬಲ

ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ ಅವರು ಭರ್ಜರಿ ಮತ ಬೇಟೆ ಮುಂದುವರಿಸಿದ್ದಾರೆ. ಇಂದು ತಾಲೂಕಿನ ಅಂಬ್ಲಿಕಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಜನಸ್ತೋಮದ ಮಧ್ಯೆ ಸಮೃದ್ಧಿ ಮಂಜುನಾಥ ಅವರು ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಕಸಬ ಹೋಬಳಿ ಕಪ್ಪಲಮಡುಗು ಪಂಚಾಯಿತಿಯ ವಡ್ಡಹಳ್ಳಿ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣನವರ ಅಧ್ಯಕ್ಷತೆಯಲ್ಲಿ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಪ್ರಚಾರ ನಡೆಸಿದರು. ಸಮೃದ್ಧಿ ಮಂಜುನಾಥ್ ಅವರನ್ನು ತಮ್ಮ ಮನೆ ಮಗನಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಈ ವೇಳೆ ತಾಲ್ಲೂಕು ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES