Wednesday, January 22, 2025

ಈ ಸೊಪ್ಪುಗಳ ಸೇವನೆಯಿಂದ ಸಿಗಲಿದೆ ಆರೋಗ್ಯದಲ್ಲಿ ವೃದ್ಧಿ

ಸೊಪ್ಪು ತರಕಾರಿಯನ್ನು ಕೆಲವರು ಹೆಚ್ಚು ಸೇವನೆ ಮಾಡುತ್ತಾರೆ ಇನ್ನೂ ಕೆಲವುರು ಸೊಪ್ಪುಗಳನ್ನು ಕಡಿಮೆ ಸೇವನೆ ಮಾಡುತ್ತಾರೆ. ಸೊಪ್ಪಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು,ಅದು ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಶೇಷವಾಗಿ ಕ್ಯಾಲ್ಸಿಯಂ,ಕಬ್ಬಿಣ,ಖನಿಜಗಳು,ಜೀವಸತ್ವಗಳು,ಪ್ರೋಟೀನ್ ಮತ್ತು ಪೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದರೆ ಅಂತಹ ಸೊಪ್ಪು ತರಕಾರಿಗಳು ಯಾವುದು ಎಂದು ತಿಳಿಯೋಣ ಬನ್ನಿ…

1. ಮೆಂತೆ ಸೊಪ್ಪು : ಈ ಸೊಪ್ಪಿನಲ್ಲಿ ಕಹಿ ಗುಣ ಹೊಂದಿದ್ದರು ಅದರಲ್ಲಿ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡುತ್ತದೆ. ಹೊಟ್ಟೆ ನೋವು,ಅಜೀರ್ಣ,ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಸೊಪ್ಪಿನಿಂದ ಮನೆಔಷಧಿಯನ್ನು ತಯಾರಿಸಬಹುದು. ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಸೊಪ್ಪು ತುಂಬಾ ಪ್ರಯೋಜನಕಾರಿಯಾಗಿದೆ.

2.ಕೊತ್ತಂಬರಿ ಸೊಪ್ಪು : ಈ ಸೊಪ್ಪಿನಲ್ಲಿ ವಿಟಮಿನ್ ಎ,ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​ಗಳು ಅಧಿಕವಾಗಿದ್ದು,ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೊಪ್ಪನ್ನು ತಿಂದರೆ ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ಕ್ಯಾಲ್ಸಿಯಂ,ಕಬ್ಬಿಣ ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಮ್​ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ.

3. ಪಾಲಕ್ ಸೊಪ್ಪು: ಈ ಪಾಲಕ್ ಜೀರ್ಣಕ್ರಿಯೆಯ ಸಮಸ್ಯೆಯಿಂದ ತೂಕ ಇಳಿಸುವವರಿಗೆ ಎಲ್ಲದಕ್ಕೂ ಸಹಾಯ ಮಾಡುತ್ತದೆ. ಇದು ಪೋಲಿಕ್ಆಮ್ಲ,ಕಬ್ಬಿಣ,ಕ್ಯಾಲ್ಸಿಯಂ ಮತ್ತು ಹೆಚ್ಚಿನ ಪ್ರಮಾಣದ ಪೈಬರ್ ಅನ್ನು ಸಹ ಒಳಗೊಂಡಿದೆ. ಪಾಲಕ್ ಸೊಪ್ಪನ್ನು ತಿನ್ನುವುದರಿಂದ ದೃಷ್ಟಿಗೆ ಕೂಡ ಒಳ್ಳೆಯದು. ಮೂಳೆಗಳನ್ನು ಬಲಪಡಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಕರಿಬೇವು : ಕರಿಬೇವಿನಲ್ಲಿ ವಿಟಮಿನ್ ಸಿ ಮತ್ತು ಬೀಟಾ- ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಉಪಯೋಗಿಸಲ್ಪಡುತ್ತದೆ. ಯಾವುದೇ ಆಂಗ್ಲ ಔಷಧಿಗಳಿಂತ ಮನುಷ್ಯನ ದೇಹದಲ್ಲಿ ರಕ್ತದಲ್ಲಿ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿಟ್ಟು , ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕರಿಬೇವಿನ ಸೊಪ್ಪು ನಿಯಂತ್ರಣದಲ್ಲಿಡುತ್ತದೆ.

5. ಒಂದೆಲಗ ಸೊಪ್ಪು : ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವಂತ ಒಂದು ಅದ್ಭುತ ಸೊಪ್ಪು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣೆ ಶಕ್ತಿ ವೃದ್ಧಿ,ಕಲಿಕೆಯ ಶಕ್ತಿ ಹೆಚ್ಚಿಸಲು ಈ ಸೊಪ್ಪು ತುಂಬಾ ಸಹಾಯಕಾರಿ.

6.ನುಗ್ಗೆ ಸೊಪ್ಪು : ಕ್ಯಾನ್ಸರ್ ಕಾಯಿಲೆಯ ಹಾಗೂ ಸಕ್ಕರೆ ಕಾಯಿಲೆಗಳನ್ನು ದುರಮಾಡಲು ಇದು ಸಹಾಯಕ ಈ ಸೊಪ್ಪಿನಲ್ಲಿ ಔಷಧಿ ಗುಣವಿರುವುದರಿಂದ ಆರೋಗ್ಯ ವೃದ್ಧಿಗೆ ಸಹಾಯಕ.

RELATED ARTICLES

Related Articles

TRENDING ARTICLES