Saturday, August 23, 2025
Google search engine
HomeUncategorizedಬಂಜಾರ ಸಮುದಾಯದ ಅಭಿವೃದ್ಧಿ ಬದ್ಧ : ಬಿ.ಸಿ ಪಾಟೀಲ

ಬಂಜಾರ ಸಮುದಾಯದ ಅಭಿವೃದ್ಧಿ ಬದ್ಧ : ಬಿ.ಸಿ ಪಾಟೀಲ

ಹಾವೇರಿ : ಬಂಜಾರ ಸಮುದಾಯ ವಾಸಿಸುವ ಗ್ರಾಮಗಳಲ್ಲಿ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಕೃಷಿ ಸಚಿವ ಹಾಗೂ ಹಿರೆಕೇರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ ತಿಳಿಸಿದ್ದಾರೆ.

ಹಿರೇಕೆರೂರ ಮತಕ್ಷೇತ್ರದ ಚೊಗಚಿಕೊಪ್ಪ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ, ಗ್ರಾಮಸ್ಥರನ್ನುದ್ದೇಶಿಸಿ ಬಿ.ಸಿ ಪಾಟೀಲ್ ಅವರು ಮಾತನಾಡಿದ್ದಾರೆ.

ಬಂಜಾರ ಸಮುದಾಯದ ಜನರ ಅನುಕೂಲಕ್ಕಾಗಿ ತಾಲೂಕ ಕೇಂದ್ರ ಹಿರೇಕೆರೂರನಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶನ ಹಾಗೂ ಅನುದಾನ ನೀಡಿ, ಭವನ ನಿರ್ಮಾಣ ಮಾಡಿದ್ದೇವೆ. ಬಂಜಾರ ಸಮುದಾಯ ವಾಸಿಸುವ ಗ್ರಾಮಗಳಲ್ಲಿ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಕೆರೆ ತುಂಬುವುದು, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಸಕಲ ರೀತಿಯಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ಬಂಜಾರ ಸಮುದಾಯದವರಲ್ಲಿ ತಪ್ಪು ತಿಳುವಳಿಕೆ ತುಂಬಿ, ಅದರ ದುರ್ಲಾಭ ಪಡೆಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ‘ಕೌರವ’ ಪಾಟೀಲ್ ಶಕ್ತಿ ಪ್ರದರ್ಶನ : ವಿಜಯೇಂದ್ರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ

ಮತ್ತೊಮ್ಮೆ ಅವಕಾಶ ನೀಡಿ

ತಾವುಗಳು ಬುದ್ಧಿವಂತರು. ನಾವುಗಳು ನಿಮ್ಮೊಂದಿಗೆ ಇದ್ದೇವೆ. ತಪ್ಪು ಮಾಹಿತಿಗೆ ಮನ್ನಣೆ ನೀಡದೆ ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡಿ. ಹಿರೆಕೇರೂರು ಸಮಗ್ರ ಅಭಿವೃದ್ಧಿ, ಬಿ.ಸಿ ಪಾಟೀಲ್ ಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮತ ಬೇಟೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಆರ್.ಎನ್ ಗಂಗೊಳ, ಲಿಂಗರಾಜ ಚಪ್ಪರದಳ್ಳಿ, ಗಂಗಾಧರ್, ಸೃಷ್ಟಿ ಪಾಟೀಲ ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments