Monday, December 23, 2024

‘ತಾಯಿ ಪ್ರೀತಿ’ ನೆನೆದು ಸಮೃದ್ಧಿ ಮಂಜುನಾಥ್ ಭಾವುಕ

ಬೆಂಗಳೂರು : ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ಚುನಾವಣಾ ಪ್ರಚಾರದ ವೇಳೆ ತಾಯಿಯ ಪ್ರೀತಿ ನೆನೆದು ಭಾವುಕರಾಗಿದ್ದಾರೆ.

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದಾಗ ತಾಯಿ ಸಮಾನರು ತಿನ್ನಸಿ ನೀಡಿ ಸಮೃದ್ಧಿ ಮಂಜುನಾಥ್ ಅವರಿಗೆ ಆಶೀರ್ವದಿಸಿದ್ದಾರೆ. ಈ ವೇಳೆ ನನ್ನ ತಾಯಿಯ ಪ್ರೀತಿ ನೆನೆದು ಭಾವುಕರಾದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಮೃದ್ಧಿ ಮಂಜುನಾಥ್ ಅವರು, ಯಾರು ಏನೇ ಮಾತನಾಡಲಿ, ಏನೇ ಮಾಡಲಿ. ನಮ್ಮ ಮುಳಬಾಗಿಲು ಕ್ಷೇತ್ರದ ತಾಯಿ-ತಂದೆಯರು, ಯುವ ಸಮುದಾಯದ ಆಶೀರ್ವಾದವಿದ್ದರೆ ನಾನು ಎಲ್ಲವನ್ನೂ ಸಾಧಿಸಬಲ್ಲೆ ಎಂದು ಹೇಳಿದ್ದಾರೆ.

ಅಭೂತಪೂರ್ವ ಬೆಂಬಲ

ಮುಳಬಾಗಿಲು ವ್ಯಾಪ್ತಿಯ ತಾಯಲೂರು ಹೋಬಳಿ, ಮಲ್ಲನಾಯಕನಹಳ್ಳಿ ಪಂಚಾಯಿತಿ, ದೊಮ್ಮಸಂದ್ರ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಮ್ಮ ನಡೆ ನಿಮ್ಮ ಮನೆಯ ಕಡೆ ಪ್ರಚಾರ ಕಾರ್ಯಕ್ರಮ ನಡೆಯಿತು. ಸಮೃದ್ಧಿ ಮಂಜುನಾಥ್ ಪ್ರಚಾರಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ಲಭಿಸಿತು. ಈವೇಳೆ ತಾಲ್ಲೂಕು ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಸೌಹಾರ್ದತೆ ಸಂದೇಶ ಸಾರಿದ ಸಮೃದ್ಧಿ ಮಂಜುನಾಥ್

ತಾಯಲೂರು ಹೋಬಳಿ, ತಿಮ್ಮರಾವುತನಹಳ್ಳಿ ಪಂಚಾಯಿತಿ, ಕೆ.ಬಿಕ್ಕನಹಳ್ಳಿ ಗ್ರಾಮ, ಪುಲಿಪಾಪೇನಹಳ್ಳಿ, ಬಸವರಾಜಪುರ ಗ್ರಾಮ, ಮೋಪರಹಳ್ಳಿ ಗ್ರಾಮ, ಜೆ.ಅಗ್ರಹಾರ, ವಜ್ರನಾಗೇನಹಳ್ಳಿ, ತಿಮ್ಮನಾಯಕನಹಳ್ಳಿ, ತಿಮ್ಮಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಮೃದ್ಧಿ ಮಂಜುನಾಥ್ ಅಬ್ಬರದ ಪ್ರಚಾರ ನಡೆಸಿದರು.

RELATED ARTICLES

Related Articles

TRENDING ARTICLES