Sunday, December 22, 2024

ರಮ್ಯಾರನ್ನು ಆಹ್ವಾನಿಸುವಷ್ಟು ‘ಬಿಜೆಪಿ ಬರಗೆಟ್ಟಿಲ್ಲ’ : ಆರ್ ಅಶೋಕ್

ಬೆಂಗಳೂರು : ನಟಿ ರಮ್ಯಾ ಅವರು ಬಿಜೆಪಿಯಿಂದ ನನಗೆ ಆಹ್ವಾನವಿತ್ತು ಎಂದು ಹೇಳಿರುವ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್​​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಟಿ ರಮ್ಯಾರನ್ನು ಕರೆಯುವಷ್ಟು ಬಿಜೆಪಿ ಅಷ್ಟೊಂದು ಬರಗೆಟ್ಟು ಹೋಗಿಲ್ಲ. ಶೆಟ್ಟರ್, ಸವದಿ ಬಿಟ್ಟು ಹೋದ ಸಮಯದಲ್ಲೇ ತಲೆಕೆಡಿಸಿಕೊಂಡಿಲ್ಲ. ರಮ್ಯಾ ಕಾಂಗ್ರೆಸ್​​ನಲ್ಲಿದ್ದವರು, ಲಾಭಕ್ಕಾಗಿ ಹಾಗೆ ಹೇಳಿರಬಹುದು. ಬಿಜೆಪಿಗೆ ರಮ್ಯಾರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಸ್ಪರ್ಧಿಸಲು ಮೋದಿ ಸೂಚನೆ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್​.ಅಶೋಕ್ ಅವರು ಪ್ರಚಾರ ಆರಂಭಿಸಿದ್ದಾರೆ. ಕನಕಪುರ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡು ಎಂದು ಮೋದಿ ಕಳುಹಿಸಿದ್ದಾರೆ. ಇಡೀ ಕನಕಪುರ ಕ್ಷೇತ್ರದ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅಶೋಕ್​ ನಮ್ಮವನು ಎಂದು ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸೌಹಾರ್ದತೆ ಸಂದೇಶ ಸಾರಿದ ಸಮೃದ್ಧಿ ಮಂಜುನಾಥ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಗಾಂಧಿ ಬೀದಿಗೆ ಬಂದಿದ್ದಾರೆ, ಮನೆ ಖಾಲಿ ಮಾಡಿಸಿದ್ದಾರೆ. ರಾಹುಲ್ ಗಾಂಧಿಗೆ ಆದ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್​​ಗೆ ಬರಲಿದೆ. ಕೇಂದ್ರ ಕೊಟ್ಟ ಅನುದಾನದಲ್ಲಿ ಕನಕಪುರ ಕ್ಷೇತ್ರ ಅಭಿವೃದ್ಧಿ ಆಗಿದೆ ಎಂದು ಆರ್​.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಶೋಕ್ ವಿರುದ್ಧ ಕಾರ್ಯಕರ್ತ ಕಿಡಿ

ಕನಕಪುರದ ಟಿ.ಬೇಕುಪ್ಪೆ ವೃತ್ತದಲ್ಲಿ ಆರ್​.ಅಶೋಕ್​ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಡ್ಡಿಪಡಿಸಿದ್ದಾರೆ. ಕನಕಪುರ ಕಾಂಗ್ರೆಸ್ಸಿಗರ ಮನೆ, ಇಲ್ಲಿ ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಬೇಡಿ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್​ ಕಾಲೇಜನ್ನು ಕಸಿದುಕೊಂಡ್ರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES