Wednesday, January 22, 2025

ಹಿರೆಕೇರೂರು ಜನತೆ ‘ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ’ : ಬಿ.ಸಿ.ಪಾಟೀಲ ವಿಶ್ವಾಸ

ಬೆಂಗಳೂರು : ಕಳೆದೊಂದು ವಾರದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ ಹಿರೆಕೇರೂರು ಕ್ಷೇತ್ರದಲ್ಲಿ ಚುನಾವಣೆಯ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹೋದಲೇಲ್ಲಾ ಬಿಜೆಪಿಯ ಪರವಾಗಿ ಜನರ ಜೈಕಾರ ಕೇಳಿ ಬರುತ್ತಿವೆ.

ಪ್ರಚಾರದ ವೇಳೆ ಮಾತನಾಡಿದ ಬಿ.ಸಿ.ಪಾಟೀಲ, ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅಭಿವೃದ್ಧಿ ಸ್ಪರ್ಶ ನೀಡಿದ್ದೇನೆ. ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತೊಮ್ಮೆ ಜನರ ಆರ್ಶಿವಾದ ಬಯಸುತ್ತಿದ್ದೇವೆ. ಹಿರೆಕೇರೂರು ಕ್ಷೇತ್ರದ ಜನತೆ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ವಡೇರಹಳ್ಳಿ, ಎಲವದಹಳ್ಳಿ,ಆಲದಗೇರಿ, ಕೋಡ್ ಗ್ರಾಮ ಸೇರಿದಂತೆ 10.ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಬಿ.ಸಿ.ಪಾಟೀಲ ಅದ್ಧೂರಿ ಸ್ವಾಗತ ಕೋರಿ, ಬಿಜೆಪಿ ಪರವಾಗಿ ಒಲವು ತೋರಿದರು.

ಇದನ್ನೂ ಓದಿ : ಪತ್ನಿ ವನಜಾ ಹುಟ್ಟುಹಬ್ಬ ಆಚರಿಸಿದ ಬಿ.ಸಿ ಪಾಟೀಲ್

ಪತ್ನಿ, ಮಗಳು ಸಾಥ್

ಸಚಿವ ಬಿ.ಸಿ ಪಾಟೀಲ ಅವರು ಹಿರೇಕೆರೂರು ಕ್ಷೇತ್ರದ ತಾವರಗಿ ಗ್ರಾಮಕ್ಕೆ ಭೇಟಿ ನೀಡಿ, ವಿಧಾನಸಭಾ ಚುನಾವಣೆಯ ನಿಮಿತ್ತ ಪ್ರಚಾರ ಕೈಗೊಂಡು, ಮತಯಾಚನೆ ಮಾಡಿದರು. ಈ ವೇಳೆ ಪತ್ನಿ ವನಜಾ ಪಾಟೀಲ, ಸೃಷ್ಟಿ ಪಾಟೀಲ ಸಾಥ್ ನೀಡಿದರು. ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಗಂಗಾಧರ್ ಇದ್ದರು.

ಬಿ.ಎಚ್ ಬನ್ನಿಕೊಡ ಅವರ ಅಭಿಮಾನಿಗಳಾದ ಕುಬೇರ ಗೌಡ ಪಾಟೀಲ್, ರೇವಣಪ್ಪ ದಿಗ್ದಳ್ಳಿ ಅವರು ಬಿ.ಸಿ ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಹಿರೇಕೆರೂರು ವ್ಯಾಪ್ತಿಯ ವಡೇರ ಹಳ್ಳಿ ಮತ್ತು ಎಲವದ ಹಳ್ಳಿ ಗ್ರಾಮಗಳಲ್ಲಿ ಸಚಿವ ಬಿ.ಸಿ ಪಾಟೀಲ ಅವರು ಪ್ರಚಾರ ಕೈಗೊಂಡು, ಮತಯಾಚನೆ ಮಾಡಿದರು.

RELATED ARTICLES

Related Articles

TRENDING ARTICLES