Monday, December 23, 2024

ನಾನೇನು ‘ಮುಸ್ಲಿಮರ ಆಸ್ತಿ’ ಕಸಿದುಕೊಂಡಿಲ್ಲ : ಶಾಸಕ ಯತ್ನಾಳ್

ವಿಜಯಪುರ : ನಾನೇನು ಮುಸ್ಲಿಮರ ಆಸ್ತಿ ಕಸಿದುಕೊಂಡಿಲ್ಲ. ಎಷ್ಟು ಅಭಿವೃದ್ಧಿ ಮಾಡಬೇಕು ಅಷ್ಟು ಮಾಡಿದ್ದೀನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಿಂದ ಲಿಂಗಾಯತ ವಿಚಾರ ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಯಾರದ್ದೂ ಆಸ್ತಿ ಕಸಿದುಕೊಂಡಿಲ್ಲಾ, ಮುಸ್ಲಿಮರೂ ಆರಾಮ ಆಗಿ ಇದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನವರು ಒಂದೆಡೆ ಎಲ್ಲಾ ಮಠಾಧೀಶರ ಬಳಿಗೆ ಹೋಗ್ತಿದ್ದಾರೆ. ಸ್ವಾಮೀಜಿಗಳ ಕಾಲು ಹಿಡಿದು ಸಹಾಯ ಮಾಡಿ ಅಂತಿದ್ದಾರೆ. ಈಗ್ಯಾಕೆ ಹೋಗ್ತಿದಿರಿ. ಮೊದಲು ದರ್ಗಾಕ್ಕೆ ಹೋಗ್ತಿದ್ರಿ, ಈಗ್ಯಾಕೆ ಸ್ವಾಮೀಜಿಗಳ ಬಳಿ ಹೋಗ್ತಿರಿ. ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ಇಲ್ಲದೆ ಶಾಂತವಾಗಿದೆ. ಹಿಂದೂಗಳು ಎಂದು ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ ಎಂದಿದ್ದಾರೆ.

ರಾಗಾ ಬಿಜೆಪಿ ಸ್ಟಾರ್ ಕ್ಯಾಂಪೇನರ್

ರಾಹುಲ್ ವಿಜಯಪುರಕ್ಕೆ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಅವರಿಗೆ ಸ್ವಾಗತ ಮಾಡುತ್ತೇವೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ. ರಾಹುಲ್ ಗಾಂಧಿ ಅವರು ಬಿಜೆಪಿ ಸ್ಟಾರ್ ಕ್ಯಾಂಪೇನರ್ ಇದ್ದಂಗೆ. ಮೊದಲು 15 ಸಾವಿರ ಲೀಡ್ ನಲ್ಲಿ ಬರ್ತೀನಿ ಅಂದುಕೊಂಡಿದ್ದೆ. ಈಗ ರಾಹುಲ್‌ ಗಾಂಧಿ ಬಂದು ಹೋದಮೇಲೆ ನಾನು 50 ಸಾವಿರ ಲೀಡ್ ಬರ್ತೀನಿ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : ‘ಎಂ.ಬಿ ಪಾಟೀಲ್ ಸಿಎಂ’ ಆದ್ರೆ ಒಳ್ಳೆಯದು : ಯತ್ನಾಳ್

.29ಕ್ಕೆ ಮೋದಿ ಬರ್ತಾರೆ

ಏಪ್ರಿಲ್ 29ರಂದು ಪ್ರಧಾನಿ ನರೇಂದ್ರ ಮೋದಿ ವಿಜಯಪುರಕ್ಕೆ ಬರ್ತಾರೆ. ಅಂದು ಮಧ್ಯಾಹ್ನ 2 ಗಂಟೆಗೆ ವಿಜಯಪುರದಲ್ಲಿ ಪ್ರಧಾನಿ ಕಾರ್ಯಕ್ರಮ ಇದೆ. ಮೋದಿ ಬಂದ ಮೇಲೆ ಮತ್ತೆ 30 ರಿಂದ 40 ಸ್ಥಾನ ಹೆಚ್ಚಿಗೆ ಬರುತ್ತವೆ. ಈ ಬಾರಿ ಕಾಂಗ್ರೆಸ್ 60 ರಿಂದ 70 ಸೀಟ್ ಬರುತ್ತವೆ. ಬಿಜೆಪಿ 140 ರಿಂದ 150 ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ರನಟರಿಗಿಂತ ನಾನೇನು ಕಮ್ಮಿ ಇಲ್ಲ

ವಿಜಯಪುರಕ್ಕೆ ಸುದೀಪ್ ಸೇರಿದಂತೆ ಸ್ಟಾರ್ ಪ್ರಚಾರಕರು ಬರ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಈಗಾಗಲೇ ನಮ್ಮ ನಾಯಕರಿಗೆ ಹೇಳಿದ್ದೇನೆ. ನನಗೆ ಪ್ರಧಾನಿ, ಅಮೀತ್ ಶಾ ಟಿಪಿ ಸಾಕು. ಯಾವುದೇ ಸಿನಿಮಾ ನಟರುಗಳು ನನಗೆ ಬೇಡ. ಚಿತ್ರನಟರಿಗಿಂತಲೂ ನಾನೇನು ಕಡಿಮೆ ಇಲ್ಲ. ಡೈರೆಕ್ಟರ್, ಆಕ್ಟರ್, ಕಥಾ ಸಂಕಲನ ನಾನೇ ಮಾಡ್ತಿನಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

RELATED ARTICLES

Related Articles

TRENDING ARTICLES