Wednesday, January 22, 2025

ಸಾಯೋ ಸಮಯದಲ್ಲೂ ಎಲೆಕ್ಷನ್ ಗೆ ನಿಲ್ಲಬೇಕಾ? : ಮುನಿಸ್ವಾಮಿ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ಸಾಯೋ ಸಮಯದಲ್ಲೂ ಎಲೆಕ್ಷನ್​​ಗೆ ನಿಲ್ಲಬೇಕಾ? ಎಂದು ಜಗದೀಶ್ ಶೆಟ್ಟರ್ ವಿರುದ್ಧ ಕೋಲಾರ ಸಂಸದ ಎಸ್. ಮುನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಪಟ್ಟ ಸೇರಿದಂತೆ ಹಲವು‌ ಹುದ್ದೆಗಳನ್ನು ಜಗದೀಶ್ ಶೆಟ್ಟರ್​​ ಅನುಭವಿಸಿದ್ದಾರೆ. ಪಕ್ಷ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ‌ ಮಂತ್ರಿ ಅಥವಾ ರಾಜ್ಯಪಾಲರನ್ನಾಗಿ ಮಾಡುವ ಭರವಸೆ ನೀಡಿತ್ತು. ಆದರೆ, ಜಗದೀಶ್ ಶೆಟ್ಟರ್ ಅವರು ಇಲ್ಲೇ ಗೂಟಾ ಹೊಡ್ಕೊಂಡು‌ ಇರಬೇಕು ಅನ್ನೋ ಲೆಕ್ಕದಲ್ಲಿ ಕಾಂಗ್ರೆಸ್​​​ಗೆ ವಲಸೆ ಹೋಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ : ಬಿಜೆಪಿ ಅಧಿಕಾರಕ್ಕೆ ಬಂದ್ರೆ ‘ಈ ಸಮುದಾಯಕ್ಕೆ ಸಿಎಂ’ ಸ್ಥಾನ

ಸಾಯೋವರೆಗೂ ಎಲೆಕ್ಷನ್​ಗೆ ನಿಲ್ಲಬೇಕೆಂಬ ಮಹದಾಸೆ ಅವರದಾ? ಬಿಜೆಪಿ ಪಕ್ಷ ಅವರಿಗೆ ಯಾವ ಅನ್ಯಾಯ ಮಾಡಿದೆ? ಎಂದು ಬಿಜೆಪಿ ತೊರೆದ ನಾಯಕರ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಕೋಲಾರದಲ್ಲಿ ಮೋದಿ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕೋಲಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ ಅವರು ಕೆಂದಟ್ಟಿ ಮತ್ತು ಅರಬಿಕೊತ್ತನೂರು ಸಮೀಪ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES