Monday, December 23, 2024

ಶಿಡ್ಲಘಟ್ಟದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠ : ‘ಕಮಲ ಹಿಡಿದ’ ನೂರಾರು ಮುಖಂಡರು

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಜನಪರ ಸೇವೆ ಮೆಚ್ಚಿ ಇಂದೂ ಕೂಡ ನೂರಾರು ಕಾರ್ಯಕರ್ತರು, ಹಾಲಿ ಹಾಗೂ ಮಾಜಿ ಗ್ರಾಮ‌ ಪಂಚಾಯಿತಿ ಸದಸ್ಯರು ಶಿಡ್ಲಘಟ್ಟ ನಗರದ ಸೇವಾ ಸೌಧ ಭವನದಲ್ಲಿ ಬಿಜೆಪಿ ಪಕ್ಷಕ್ಕೆ‌ ಸೇರ್ಪಡೆಯಾದರು.

ಶಿಡ್ಲಘಟ್ಟ ಕ್ಷೇತ್ರದ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರಿಪ್ರಸಾದ್ ನೇತೃತ್ವದಲ್ಲಿ ಗಜ್ಜಿಗಾನಹಳ್ಳಿ ಹಾಗೂ ದೊಡ್ಡದಾಸೇನಹಳ್ಳಿಯ ಗ್ರಾಮಸ್ಥರು ಸೇರ್ಪಡೆಯಾಗಿ ಬಿಜೆಪಿಗೆ ಶಕ್ತಿ ತುಂಬುದವ ಕೆಲಸ ಮಾಡಿದರು.

ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಾರಾಯಣ(ಬುದಳ) ಅವರು ಪಕ್ಷ ತೊರೆದು ಮಾಜಿ ಶಾಸಕ ರಾಜಣ್ಣ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಶಾಲು ಹಾಗೂ ಹಾರ ಹಾಕುವ ಮೂಲಕ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ, ಪಕ್ಷ ಸಂಘಟನೆಗೆ ಶ್ರಮಿಸುವಂತೆ ಮನವಿ ಮಾಡಲಾಯಿತು.

ಇದನ್ನೂ ಓದಿ : ‘ತಿಮ್ಮಪ್ಪನ ದರ್ಶನ’ ಪಡೆದ ಸೀಕಲ್ ರಾಮಚಂದ್ರಗೌಡ

ಇವರೇ ಬಿಜೆಪಿ ಸೇರಿದ ನಾಯಕರು

ಉಮಾದೇವಿ, ಮಂಜುಳಾ, ಮಂಜಮ್ಮ, ಕವಿತಾ, ರಾಮಕ್ಕ, ಮುನಿ ಲಕ್ಷ್ಮಮ್ಮ, ಪೂಜಮ್ಮ, ನೀಲ, ಮಾಲ, ಮಂಜಮ್ಮ, ಶಾಂತಮ್ಮ, ಚಂದ್ರ ಮೂರ್ತಿ, ಗಂಗಾಧರ್, ಸತೀಶ್, ದ್ಯಾವಪ್ಪ, ನಾರಾಯಣಮ್ಮ, ಸಹನಾ, ರಾಮಾಂಜಿ, ನಾರಾಯಣಸ್ವಾಮಿ, ಕೃಷ್ಣ ಮೂರ್ತಿ, ಕೃಷ್ಣಪ್ಪ, ರಾಹುಲ್, ಅಭಿಲಾಷ್, ಕಿಶೋರ್, ಗಿರೀಶ್, ಜಶ್ವಂತ್, ಮುನಿವೆಂಕಟಪ್ಪ, ಮುನಿಯಪ್ಪ, ಸಂತೋಷ್, ಅಮರನಾಥ್, ನಾರಾಯಣ ಸ್ವಾಮಿ, ಕದಿರಪ್ಪ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ದೊಡ್ಡ ದಾಸೇನಹಳ್ಳಿ ಗ್ರಾಮದಲ್ಲಿ ಮಂಜುನಾಥ್, ಶ್ರೀನಿವಾಸ್, ಗುರು ಮೂರ್ತಿ, ಮುನಿಯಪ್ಪ, ನರಸಿಂಹ ಮೂರ್ತಿ, ಶಿವಣ್ಣ, ಆಂಜಿನ್ ಪೂಜಾರಿ, ರಮೇಶ್, ಶ್ರೀನಿವಾಸ್ ನಾಗರಾಜ್ ಹಾಗೂ ಇನ್ನಿತರರು ಸ್ವಯಂ ಪ್ರೇರಿತವಾಗಿ ಪಕ್ಷಕ್ಕೆ ಸೇರಿದ್ದಾರೆ.

RELATED ARTICLES

Related Articles

TRENDING ARTICLES