Monday, December 23, 2024

ನಿಮ್ಮ ‘ಕೈ’ ಕೆಸರಿನಲ್ಲಿ ನಮ್ಮ ‘ಕಮಲ’ ಅರಳಿಸಿ : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ನಿಮ್ಮ ‘ಕೈ’ ಕೆಸರಿನಲ್ಲಿ ನಮ್ಮ ಕಮಲ ಅರಳಿಸಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಮನವಿ ಮಾಡಿದ್ದಾರೆ.

ಶಿಡ್ಲಘಟ್ಟದಲ್ಲಿ ಬಣ್ಣ ಮತ್ತು ಗಾರೆ ಕೆಲಸದ ಕಾರ್ಮಿಕರ ಸಂಘದ 16 ಸಾವಿರ ಸದಸ್ಯರು ಸೀಕಲ್ ರಾಮಚಂದ್ರಗೌಡರಿಗೆ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ. ಎಲ್ಲರೂ ಸಹ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದರೊಂದಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದ್ದಾರೆ.

ಈ ವೇಳೆ ಮತನಾಡಿರುವ ಸೀಕಲ್ ರಾಮಚಂದ್ರಗೌಡ ಅವರು, ನಿಮ್ಮ ಅಭಿವೃದ್ಧಿಯಾದರೆ ಶಿಡ್ಲಘಟ್ಟದ ಅಭಿವೃದ್ಧಿಯಾಗುತ್ತದೆ. ಶಿಡ್ಲಘಟ್ಟ ಅಂದ್ರೆ ಜನರೇ, ನಿಮ್ಮ ಕೈ ಕೆಸರಿನಲ್ಲಿ ನಮ್ಮ ಕಮಲ ಅರಳಿಸಿ. ನಿಮ್ಮ ಜೀವನ ಕೂಡ ಕಮಲ ಅರಳಿದಂತೆಯೇ ಅರಳಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ಕೇಸರಿ ಕಹಳೆ : ಸೀಕಲ್ ರಾಮಚಂದ್ರಗೌಡ ನಾಮಪತ್ರ ಸಲ್ಲಿಕೆ

ನೂರಾರು ಕಾರ್ಮಿಕರಿಗೆ ದಾರಿದೀಪ

ಬಣ್ಣ ಮತ್ತು ಗಾರೆ ಕಾರ್ಮಿಕರ ಅಧ್ಯಕ್ಷರಾದ ವೆಂಕಟರಮಣಪ್ಪ ಮಾತನಾಡಿ, ಸೀಕಲ್ ರಾಮಚಂದ್ರಗೌಡರು ಮೂಲತಃ ಸಿವಿಲ್ ಇಂಜಿನೀಯರ್ ಆಗಿರುವುದರಿಂದ ಕಾರ್ಮಿಕರ, ಶ್ರಮಿಕ ವರ್ಗದ ಜನರ ಕಷ್ಟ ಸುಖಗಳನ್ನು ಚೆನ್ನಾಗಿ ಅರಿತವರು. ನೂರಾರು ಕಟ್ಟಡಗಳನ್ನು ಕಟ್ಟಿ ಕಾರ್ಮಿಕರಿಗೆ ದಾರಿದೀಪವಾದವರು. ಅವರಿಗೆ ನಾವು ಬೆಂಬಲ ನೀಡಿದರೆ ನಮ್ಮ ಶಿಡ್ಲಘಟ್ಟದ ಜೊತೆ ನಮ್ಮಂತ ಸಾವಿರಾರು ಕಾರ್ಮಿಕರ ಜೀವನವು ಸುಧಾರಣೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಬಣ್ಣ ಮತ್ತು ಗಾರೆ ಕಾರ್ಮಿಕರ ಅಧ್ಯಕ್ಷರಾದ ವೆಂಕಟರಮಣಪ್ಪ, ಗೌರವ ಅಧ್ಯಕ್ಷರಾದ ಮುನಿರಾಜು, ಉಪಾಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಬಾಬು ಪಿ, ಸಹಕಾರ್ಯದರ್ಶಿ ನಾರಾಯಣ ಸ್ವಾಮಿ ಜಿ.ಎಂ, ಕಾರ್ಯದರ್ಶಿ ನಾರಾಯಣ ಸ್ವಾಮಿ ಕೆ.ಎಂ, ಸಹ ಸಂಚಾಲಕರು ಬಾಬು ಕೆ, ಖಜಾಂಚಿ, ಟಿ.ಎಂ ಸುಬ್ರಮಣಿ, ಸಲಹೆಗಾರರಾದ ಬಾಬಾಜಾನ್ ಮತ್ತು  ಜನಾರ್ಧನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ ಕೆ ವಿ, ನಾರಾಯಣ ಸ್ವಾಮಿ ಬಿ, ಮಕೇಶ್, ಶಿವಣ್ಣ, ಶ್ರೀನಿವಾಸ್, ತಿರುಮಲೇಶ್ ಅವರು ಇದೇ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

RELATED ARTICLES

Related Articles

TRENDING ARTICLES