Sunday, January 19, 2025

ತಾಯಿಯ ಋಣ ಜನುಮ-ಜನುಮದಲ್ಲೂ ತೀರಿಸಲಾಗದು : ಸಮೃದ್ಧಿ ಮಂಜುನಾಥ್

ಬೆಂಗಳೂರು : ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ತಮ್ಮ ತಾಯಿ ದಿವಂಗತ ಮುನಿಯಮ್ಮ ಅವರ ಸಮಾಧಿಗೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ.

ತಮ್ಮ ತಾಯಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಂದಿಗೆ ನಮ್ಮ ತಾಯಿ ನಮ್ಮನ್ನ ಅಗಲಿ ಒಂದು ವರ್ಷವಾಯಿತು. ತಾಯಿಯಿಲ್ಲವೆಂಬ ನೋವು ಭರಿಸಲಾಗದು. ಪುಣ್ಯತಿಥಿಯ ಅಂಗವಾಗಿ ಪೂಜೆ ಕೈಂಕಾರ್ಯಗಳನ್ನು ಮುಗಿಸಿ ಆಶೀರ್ವಾದ ಪಡೆಯಲಾಯಿತು ಎಂದು ಹೇಳಿದ್ದಾರೆ.

ದೇವರ‌ ಇನ್ನೊಂದು ಹೆಸರೇ ‌ತಾಯಿ

ತಾಯಿಯ ಋಣ ಜನುಮಜನುಮದಲ್ಲೂ ತೀರಿಸಲಾಗದು. ದೇವರಿಗೆ ಎಲ್ಲ ಸಂದರ್ಭಗಳಲ್ಲಿ ಎಲ್ಲ ಕಡೆಗಳಲ್ಲಿ ಇರಲು ಸಾಧ್ಯವಿಲ್ಲ ಅಂತಾನೇ ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ. ದೇವರ‌ ಇನ್ನೊಂದು ಹೆಸರೇ ‌ತಾಯಿ.  ಎಲ್ಲವೂ ದೊರೆತು ಗೆಲುವು ನೋಡಬೇಕೆಂದು ಆಶಯ ಕಂಡು ಹಾರೈಸುತ್ತಿದ್ದ ತಾಯಿ ಇಂದು ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ನಾಮಪತ್ರ ಸಲ್ಲಿಕೆ : ದೇವೇಗೌಡರ ಆಶೀರ್ವಾದ

ನಿಮ್ಮ ಮನೆಯ ಮಗನನ್ನು ಉಳಿಸಿಕೊಳ್ಳಿ

ನಮ್ಮ ತಾಲ್ಲೂಕಿನ ಜನತೆಯನ್ನು ನಂಬಿದ್ದೇನೆ. ನಿಮ್ಮ ಮನೆಯ ಮಗನಾಗಿರುವ ನನಗೆ ಈ ಬಾರಿ ಒಂದು ಅವಕಾಶ ನೀಡಿ, ನಿಮ್ಮ ಮನೆಯ ಮಗನನ್ನು ಉಳಿಸಿಕೊಳ್ಳಿ. ನಾನು ನಮ್ಮ ತಾಲ್ಲೂಕಿನ ಕಾವಲುಗಾರನಂತೆ ಕ್ಷೇತ್ರದ ಅಭಿವೃದ್ಧಿಯೊಂದಿಗೆ ನಮ್ಮ ತಾಲ್ಲೂಕಿನ ಜನತೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದು ಸಮೃದ್ಧಿ ಮಂಜುನಾಥ್ ಅವರು ಭರವಸೆ ನೀಡಿದ್ದಾರೆ.

ಇದೇ ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಾಲ್ಲೂಕಿನ ಜನರು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES