ಬೆಂಗಳೂರು : ನನ್ನನ್ನು ಹೇಗಾದರೂ ಮಾಡಿ ಚಚ್ಚಿ ಚಚ್ಚಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಸ್ಫೋಟಕ ಹೇಳಿಕ ನೀಡಿದ್ದಾರೆ.
ಇವನು ಇರುವುದಕ್ಕೆ ತಾನೇ ಕಾಂಗ್ರೆಸ್ ಗಟ್ಟಿಯಾಗುತ್ತಿದೆ ಅಂತ, ವಿರೋಧಿಗಳು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಹೇಗಾದರೂ ಮಾಡಿ ಚಚ್ಚಿ ಚಚ್ಚಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಡಿಕೆಶಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಲಿಂಗಾಯತ ಸಮಾಜವನ್ನು ಒಡೆಯುತ್ತಿದೆ : ಬಸವರಾಜ ಬೊಮ್ಮಾಯಿ
ಕೊಡಬಾರದ ಕಾಟ ಕೊಡ್ತಿದ್ದಾರೆ
ನಿನ್ನೆ ಬಂದ ತೀರ್ಪಿನ ಬಗ್ಗೆ ಕೇಳ್ತಾ ಇದ್ದೀರಿ. ರಾಜಕೀಯ ಸೀನ್ನಿಂದಲೇ ನಮ್ಮನ್ನು ತೆಗೆದು ಹಾಕಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕೇವಲ ಒಂದೇ ದಿನದಲ್ಲಿ ಏನೇನೋ ಮಾಡಿದರಲ್ಲ. ಸೋನಿಯಾ ಗಾಂಧಿ ಅವರಿಗೆ ಕೊಡಬಾರದ ಕಾಟ ಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೊಸ ಆಸ್ತಿ ಖರೀದಿ ಮಾಡಿಲ್ಲ
ಏನೇನು ಷಡ್ಯಂತ್ರ ಮಾಡುತ್ತಿದ್ದಾರೆ ಅಂತಾ ನನಗೆ ಗೊತ್ತಿದೆ. ಕಳೆದ ಬಾರಿಯೇ ನನ್ನ ಆಸ್ತಿ ಮೌಲ್ಯದ ಬಗ್ಗೆ ವಿವರಣೆ ನೀಡಬೇಕಾಯಿತು. ನಾನು ಹೊಸ ಆಸ್ತಿ ಯಾವುದನ್ನೂ ಕೂಡ ಖರೀದಿ ಮಾಡಿಲ್ಲ. ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿರುವ ಬಗ್ಗೆ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.