Saturday, January 18, 2025

ಇಂದು ರಾಜ್ಯಕ್ಕೆ ಅಮಿತ್‌ ಶಾ ಎಂಟ್ರಿ 

ಬೆಂಗಳೂರು : ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಮತ್ತೊಮ್ಮೆ ಗದ್ದುಗೆ ಏರಲು  ಈ ಬಾರಿ ಸತತ ಪ್ರಯತ್ನ ಮಾಡತ್ತಿದ್ದಾರೆ.ಇನ್ನೂ ಚುನಾವಣೆ ಗೆಲ್ಲಲು  ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಹೌದು, ಈ  ಬಾರಿ ಚುನಾವಣೆಯನ್ನು ಗೆಲ್ಲಲು ಬಿಜೆಪಿ ವರಿಷ್ಠರ ರಣತಂತ್ರ ರೂಪಸಲಿದ್ದು, ಅನೇಕ ಬಾರಿ ರಾಜ್ಯಕ್ಕೆ  ಭೇಟಿ ನೀಡುತ್ತಲ್ಲೇ ಇದ್ದಾರೆ. ಇನ್ನೂ ಕರ್ನಾಟದಲ್ಲಿ ವಿಜಯ ಪತಾಕೆ ಹಾರಿಸಲು ಕೇಸರಿ ಪಡೆ ಭರ್ಜರಿ ತಯಾರಿ ನಡಿಸಿದ್ದು, ಘಟಾನುಗಟಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಇಂದು ರಾಜ್ಯಕ್ಕೆ ಚುನುವಣಾ ಚಾಣುಕ್ಯ  

ಕೇಂದ್ರ ಗೃಹಸಚಿವ ಅಮಿತ್​ ಶಾ ಬೆಂಗಳೂರಿಗೆ ಆಗಮಿಸಲಿದ್ದು,ಎಲೆಕ್ಷನ್​ನಲ್ಲಿ ವಿಜಯಶಾಲಿಯಾಗಲು ಏನೆಲ್ಲಾ ಮಾಡಬೇಕು ಎಂಬುವುದರ ಕುರಿತು ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಏನೆಲ್ಲಾ ಇದೆ ಅಮಿತ್​ ಶಾ ಶೆಡ್ಯೂಲ್​ನಲ್ಲಿ 

  • ಮಧ್ಯಾಹ್ನ 3.15ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ
  • ದೇವನಹಳ್ಳಿಯಲ್ಲಿ ಬೃಹತ್ ರೋಡ್​ ಶೋ ಮೂಲಕ ಮತಬೇಟೆ
  • ಇಂದು ಮಧ್ಯಾಹ್ನ 3.45 ರಿಂದ ಸಂಜೆ 5.15ರವೆರಗೂ ದೇವನಹಳ್ಳಿಯಲ್ಲಿ ಅಮಿತ್‌ ಶಾ ಮೆಗಾ ರೋಡ್‌ ಶೋ
  • ಸಂಜೆ 6 ಗಂಟೆಗೆ ಖಾಸಗಿ ಹೋಟೆಲ್​ಗೆ ಶಾ ಭೇಟಿ
  • ರಾತ್ರಿ 7.35ರಿಂದ ಬಿಜೆಪಿ ನಾಯಕರ ಜೊತೆ ಮೀಟಿಂಗ್‌
  • ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ

 

 

 

 

 

RELATED ARTICLES

Related Articles

TRENDING ARTICLES