Monday, December 23, 2024

ನಾಮಪತ್ರ ಸಲ್ಲಿಕೆ ಅಂತ್ಯ : ಕೊನೆ ಕ್ಷಣದಲ್ಲಿ ಅಚ್ಚರಿ ಬೆಳವಣಿಗೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯವಾಯಿತು. ಕೊನೆ ಕ್ಷಣದಲ್ಲಿ ಕೆಲವು ಅಚ್ಚರಿ ನಡೆದಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಮತದಾನ ನಡೆಯಲಿದೆ. ಈ ಪ್ರಕ್ರಿಯೆಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಚುನಾವಣಾ ಆಯೋಗ ನೀಡಿದ್ದ ಸಮಯ ಅಂತ್ಯಗೊಂಡಿದೆ. ಸದ್ಯ ಚುನಾವಣಾಧಿಕಾರಿ ಕಚೇರಿ ಒಳಗಿರುವವರಿಗೆ ಮಾತ್ರ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗುತ್ತಿದೆ.

ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಇದೀಗ ಸಮಯವೂ ಅಂತ್ಯಗೊಂಡಿದೆ. ನಾಳೆ ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ನಡೆಸಲಿದ್ದಾರೆ. ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 10ರಂದು 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರದಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ : ಕಾಂಗ್ರೆಸ್ 5ನೇ ಪಟ್ಟಿ ಬಿಡುಗಡೆ : ಶಿಗ್ಗಾವಿ ಅಭ್ಯರ್ಥಿ ಬದಲಾವಣೆ

ಇನ್ನೂ ನಾಮಪತ್ರ ಸಲ್ಲಿಕೆ ಸಮಯ ಮುಗಿಯುವ ಕೆಲವೇ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಪದ್ಮನಾಭನಗರದ ಬದಲಾಗಿ ಕನಕಪುರದಿಂದ ಸಂಸದ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿ ಬಿಗ್ ಟ್ವಿಸ್ಟ್ ನೀಡಿದರು. ಹೊಳೆನರಸೀಪುರದಿಂದ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಬಿಜೆಪಿಯಿಂದ ಪ್ರೀತಂ ಗೌಡ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಪ್ರೀತಂ ಗೌಡ ನಾಮಪತ್ರ ಸಲ್ಲಿಕೆ ಮಾಡಿಲ್ಲ.

ಮಂಡ್ಯದಲ್ಲಿ ದಿಢೀರ್ ಬಿಗ್ ಟ್ವಿಸ್ಟ್

ಸಂಸದೆ ಸುಮಲತಾ ಅಂಬರೀಶ್ ಅವರುಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರಿಗೆ ಸಂಸದೆ ಸುಮಲತಾ ಬೆಂಬಲ ಘೋಷಿಸಿದ್ದಾರೆ.

RELATED ARTICLES

Related Articles

TRENDING ARTICLES