Wednesday, January 22, 2025

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ‘ಮುಸ್ಲಿಮರಿಗೆ ಮತ್ತೆ 2ಬಿ ಮೀಸಲಾತಿ’ : ಎಚ್.ಡಿ ದೇವೇಗೌಡ ಘೋಷಣೆ

ಹಾಸನ : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಮತ್ತೆ 2ಬಿ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ದೊಡ್ಡ ಘೋಷಣೆ ಮಾಡಿದ್ದಾರೆ.

ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ಪರ ತೆರೆದ ವಾಹನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿ ನೀಡಿದ್ದೆ. ದೇವೇಗೌಡ ಕುಟುಂಬ ಯಾರಿಗೂ ಮೋಸ ಮಾಡಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಮತ್ತೆ 2ಬಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಅಭಿವೃದ್ಧಿಗೆ ಪ್ರೀತಂ ಗೌಡ ಮಾರಕ

ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪ್ರೀತಂ ಗೌಡ ಮಾರಕವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರನ್ನು ಸೋಲಿಸಿಯೇ ತೀರಬೇಕು. ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಬಿಜೆಪಿಯ ಪ್ರೀತಂ ಗೌಡ ಅವರನ್ನು ಈ ಜಿಲ್ಲೆಯಿಂದ ತೆಗೆಯಲೇಬೇಕು. ಸ್ವರೂಪ್ ಗೆಲ್ಲಬೇಕು, ಪ್ರೀತಂಗೌಡ ಸೋಲಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ : ಜೆಡಿಎಸ್ 3ನೇ ಪಟ್ಟಿ ರಿಲೀಸ್: ಇವರೇ ಟಿಕೆಟ್ ಗಿಟ್ಟಿಸಿಕೊಂಡ 59 ಅಭ್ಯರ್ಥಿಗಳು

ಮೊದಲ ಬಾರಿಗೆ ಬಹಿರಂಗ ಪ್ರಚಾರ

ಅನಾರೋಗ್ಯ ಕಾರಣದಿಂದ ವಿಶ್ರಾಂತಿಯಲ್ಲಿದ್ದ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರದ ಮೂಲಕ ಚುನಾವಣಾ ಪ್ರಚಾರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತೆರೆದ ವಾಹನದಲ್ಲಿ ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್​ ಪರ ಮತಯಾಚನೆ ಮಾಡಿದರು. ಇದೇ ಮೊದಲ ಬಾರಿಗೆ ಬಹಿರಂಗ ಪ್ರಚಾರದಲ್ಲಿ ದೇವೇಗೌಡ ಭಾಗಿಯಾದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್​ಸಿ ಸೂರಜ್​ ರೇವಣ್ಣ ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES