Sunday, January 19, 2025

‘ಮಿಲ್ಟ್ರಿ ಹೋಟೆಲಿಂದಲೇ ಪ್ರಚಾರ’ ಆರಂಭ : ಡಿಕೆಶಿಗೆ ಬೊಮ್ಮಾಯಿ ಟಕ್ಕರ್

ಬೆಂಗಳೂರು : ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕನಕಪುರದಲ್ಲಿ ಸಾಕಷ್ಟು ಮಿಲಿಟರಿ ಹೋಟೆಲ್ ಗಳಿವೆ, ಬಂದು ಹೋಗಿ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಪ್ರಚಾರ ಮಿಲಿಟರಿ ಹೋಟೆಲ್ ನಿಂದಲೇ ಆರಂಭವಾಗುತ್ತದೆ ಎಂದು ಕುಟುಕಿದ್ದಾರೆ.

ಮಿಲಿಟರಿ ಹೋಟೆಲ್ ನಲ್ಲಿ ಸ್ಥಳೀಯ ಸಾಮಾನ್ಯ ಜನ ಇರ್ತಾರೆ. ಅಂಥ ಸಾಮಾನ್ಯ ಜನರನ್ನು ಡಿ.ಕೆ. ಶಿವಕುಮಾರ್ ಅವರು ಭೇಟಿ ಮಾಡಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡುವುದಕ್ಕೆ ಆರ್. ಅಶೋಕ್ ಹೋಗಿದಾರೆ. ಇದರಲ್ಲಿ ಏನ್ ತಪ್ಪಿದೆ? ಯಾಕೆ ಮಿಲಿಟರಿ ಹೊಟೇಲ್ ಗೆ ಹೋಗಬಾರದು? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಕೆನ್ನೆ ಹಿಂಡಿದ ಯಡಿಯೂರಪ್ಪ, ಮುಗುಳ್ನಕ್ಕ ನಟಿ ಶೃತಿ

ಸಿದ್ದರಾಮಯ್ಯಗೆ ಭಯ ಕಾಡ್ತಿದೆ

ವರುಣಾದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಭಯ, ಅನಿಶ್ಚಿತತೆ ಕಾಡುತ್ತಿದೆ. ವರುಣಾದಿಂದ ಹಲವು ಬಾರಿ ನಿಂತು ಗೆದ್ದಿದ್ದಾರೆ. ಅವರು ಸ್ವಂತ ಬಲದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಬೇಕೇ ವಿನಃ, ಈ ರೀತಿ ಬಿಜೆಪಿ ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿವೆ ಎಂಬ ಮಾತು ಸರಿಯಲ್ಲ ಎಂದು ಸಿದ್ದುಗೆ ತಿರುಗೇಟು ಕೊಟ್ಟಿದ್ದಾರೆ.

ನನ್ನ ಕ್ಷೇತ್ರ ಶಿಗ್ಗಾವಿಯಲ್ಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿವೆ. ಆದರೆ, ಇವರ ತಂತ್ರಗಾರಿಕೆಯಿಂದ ನನಗೇನು ವ್ಯತ್ಯಾಸ ಆಗಲ್ಲ ಎನ್ನುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಆರೋಪಿಸಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES